ಸಾರಿಗೆ ಸಂಸ್ಥೆಯು ಸಾರ್ವಜನಿಕರ ಸೇವೆಗಾಗಿ ಇದೇ ಹೊರತು ಲಾಭಕ್ಕಾಗಿ ಅಲ್ಲ : ಎಚ್.ಎಂ.ರೇವಣ್ಣ

Update: 2018-03-20 18:25 GMT

ಮುಂಡಗೋಡ,ಮಾ.20 : ಸರಕಾರಿ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಸೇವೆಗಾಗಿ ಇದೇ ಹೊರತು ಲಾಭಕ್ಕಾಗಿ ಅಲ್ಲ. ಜನರ ಸೇವೆಯೇ ನಮ್ಮ ಮೊದಲ ಆದ್ಯತೆ ಆದ್ದರಿಂದ ಸಂಸ್ಥೆಯು ಬೆಳೆಯ ಬೇಕಾದರೆ ಸರಕಾರಿ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಎಲ್ಲರೂ ಉಪಯೋಗಿಸಬೇಕು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು

ಮಂಗಳವಾರ ಅವರು  ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆಯನ್ನು  ಮಾಡಿ ಜ್ಯೋತಿ ಬೆಳಗಿಸಿ  ಮಾತನಾಡಿದರು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆ ಗುಣಮಟ್ಟ ದೇಶದಲ್ಲಿ ನಂ 1 ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಕರ್ನಾಟಕ ಸಾರಿಗೆ ಸಂಸ್ಥೆ 2ನೇ ಸ್ಥಾನದಲ್ಲಿದೆ. ಈ ಸ್ಥಾನಕ್ಕೇರಲು ಹಾಗೂ ಪ್ರಶಸ್ತಿಗಳು ಲಭಿಸಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಶ್ರಮ ಮಹತ್ವದಾಗಿದೆ ಎಂದರು.

ನಮ್ಮ ಸರಕಾರ ವಿದ್ಯಾರ್ಥಿಗಳಿಗಾಗಿ ಫ್ರೀ ಬಸ್ ಪಾಸ್ ನೀಡುತ್ತಿದೆ ಅಲ್ಲದೆ ಅಂಗವಿಕಲರಿಗೆ, ಸ್ವಾತಂತ್ರ ಹೋರಾಟಗಾರರಿಗೆ ಹಾಗೂ ಹಿರಿಯ ನಾಗರಿಕರಿಗೂ ಸಹಿತ ಬಸ್ ಪಾಸ್ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ವಾಕರಸಾಸಂಸ್ಥೆ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕ ಸ್ವಾಗತಿಸಿದರು. ವಾಕರಸಾ ಸಂಸ್ಥೆ ಶಿರಸಿ ಸೂಪರ್ ವೈಜರ್ ಬೋಜರಾಜ ಶಿರಾಲಿ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಪ.ಪಂ.ಅಧ್ಯಕ್ಷ ರಫೀಕ್ ಇನಾಂದಾರ, ಜಿ.ಪಂ ಸದಸ್ಯ ರವಿಗೌಡ ಪಾಟೀಲ್, ಜಯಮ್ಮ ಹಿರಳ್ಳಿ, ಎಪಿಎಮ್‍ಸಿ ಅಧ್ಯಕ್ಷ ದೇವು ಪಾಟೀಲ, ಎಚ್.ಎಂ.ನಾಯಕ, ಕೃಷ್ಣಾ ಹಿರಳ್ಳಿ, ಪಂಚಾಕ್ಷರಿ ಸಂಗೂರಮಠ, ಶಾರದಾ ರಾಠೋಡ ಸೇರಿದಂತೆ ತಾ.ಪಂ. ಸದಸ್ಯರು, ಪ.ಪಂ.ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News