×
Ad

ಇರಾಕ್ ನಲ್ಲಿ ಮೃತಪಟ್ಟ ಭಾರತೀಯರ ಡಿಎನ್‍ಎ ವರದಿಗೆ ಬೇಡಿಕೆಯಿಟ್ಟ ಸಂತ್ರಸ್ತ ಕುಟುಂಬಗಳು

Update: 2018-03-21 16:27 IST

ಹೊಸದಿಲ್ಲಿ,ಮಾ.21 : ಇರಾಕ್ ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರು ಮೃತಪಟ್ಟಿದ್ದಾರೆಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ದೃಢಪಡಿಸಿದ ನಂತರ ಬಾಧಿತ ಕುಟುಂಬಗಳು ದುಃಖದ ಮಡುವಿನಲ್ಲಿ ಮುಳುಗಿವೆ.

ಮೃತಪಟ್ಟವರಲ್ಲಿ ಒಬ್ಬನಾಗಿರುವ 39 ವರ್ಷದ ಸಗನನಂದ್ ಲಾಲ್ ಎಂಬಾತನ ಸೋದರ ಮಲ್ಕಿತ್ ರಾಮ್ ಮಾತನಾಡುತ್ತಾ "ನನ್ನ ಸೋದರ 2012ರಲ್ಲಿ ಇರಾಕ್ ದೇಶಕ್ಕೆ ತೆರಳಿ ಅಲ್ಲಿ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ. ಆತ  ಬದುಕಿದ್ದಾನೆಯೇ ಅಥವಾ ಸತ್ತಿದ್ದಾನೆಯೇ ಎಂಬುದಕ್ಕೆ ಸಚಿವಾಲಯದಿಂದ ಪುರಾವೆ ಕೇಳುತ್ತಿದ್ದೇವೆ. ಡಿಎನ್‍ಎ ವರದಿಯನ್ನು ನಮಗೆ ನೀಡಬೇಕು,'' ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಮೊಸುಲ್ ನಲ್ಲಿ ಮೃತಪಟ್ಟಿದ್ದಾನೆಂದು ದೃಢಪಟ್ಟಿರುವ ಮಂಜಿಂದರ್ ಸಿಂಗ್ ಎಂಬಾತನ ಸಹೋದರಿ ಗುರ್ಪಿಂದರ್ ಕೌರ್ ಕೂಡ ಡಿಎನ್‍ಎ ವರದಿ ನೀಡುವಂತೆ ಆಗ್ರಹಿಸಿದ್ದಾರೆ. "ಈ ವಿಚಾರವನ್ನು ರಾಜಕೀಯಗೊಳಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಾವು ಆತನ ಬಗ್ಗೆ ತಿಳಿಯಲು ಎಲ್ಲಾ ಕಡೆ ಓಡಾಡಿದೆವು, ಈಗ ಅವರೆಲ್ಲ ಮೃತಪಟ್ಟಿದ್ದಾರೆಂದು ಸರಕಾರ ಹೇಳುತ್ತಿದೆ,'' ಎಂದು ತಮ್ಮ ಅಸಮಾಧಾನ ತೋಡಿಕೊಂಡರು.

ಮೃತದೇಹಗಳನ್ನು ಪಡೆಯಲು ಕುಟುಂಬಗಳು ಇನ್ನೂ ಕಾಯಬೇಕಾಗಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News