ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಗೆ ಗೌರವ ಸಲ್ಲಿಸಿದ ಗೂಗಲ್
Update: 2018-03-21 16:57 IST
ಹೊಸದಿಲ್ಲಿ, ಮಾ.21: ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೆ ಜನ್ಮ ದಿನಾಚರಣೆ ಪ್ರಯುಕ್ತ ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ನುಡಿಸುತ್ತಿರುವ ಡೂಡಲ್ ಚಿತ್ರವನ್ನು ಇಂದು ಗೂಗಲ್ ಪ್ರಕಟಿಸಿದೆ. 1916ರಲ್ಲಿ ಬಿಸ್ಮಿಲ್ಲಾ ಖಾನ್ ಜನಿಸಿದರು. ತಮ್ಮ 6ನೆ ವರ್ಷದಲ್ಲಿ ಅವರು ವಾರಣಾಸಿಗೆ ತೆರಳಿದ್ದರು.
1950ರ ಗಣರಾಜ್ಯೊತ್ಸವ ದಿನ ಅವರ ಕಲೆ ಬೆಳಕಿಗೆ ಬಂದಿತ್ತು. ಅಂದು ಬಿಸ್ಮಿಲ್ಲಾ ಖಾನ್ ನೀಡಿದ್ದ ಪ್ರದರ್ಶನ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಸಹಿತ ಹಲವು ಪುರಸ್ಕಾರಗಳು ಇವರಿಗೆ ಸಂದಿವೆ. 2006ರ ಆಗಸ್ಟ್ 21ರಂದು ಅವರು ನಿಧನರಾದರು.