ಮಾ. 23: ‘ತೊಟ್ಟಿಲು’ ತುಳು ಚಲನಚಿತ್ರ ಬಿಡುಗಡೆ
Update: 2018-03-21 18:41 IST
ಮಂಗಳೂರು, ಮಾ.21: ತುಳು ಚಲನಚಿತ್ರ ‘ತೊಟ್ಟಿಲು’ ಮಾ. 23ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ರೋಹನ್ ಪ್ರದೀಪ್ ಅಗ್ರಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಚಿತ್ರಗಳಂತೆ ತುಳುವಿನಲ್ಲೂ ಪೈಪೋಟಿ ಆರಂಭವಾಗಿದ್ದು, ಗುಣಮಟ್ಟದ ಚಿತ್ರಗಳು ಮಾರುಕಟ್ಟಗೆ ಬರುತ್ತಿದೆ. ಮೈ ಮೂವಿ ಮೇಕರ್ಸ್ ಬ್ಯಾನರಿನಡಿ ಯಲ್ಲಿ ನಿರ್ಮಾಣದ ಮೊದಲ ತುಳುಚಿತ್ರ ಇದಾಗಿದೆ ಎಂದರು.
ಚಿತ್ರದ ನಾಯಕ ನಟ ವಿಜೇತ್ ಸುವರ್ಣ ಮಾತನಾಡಿ ನನಗೆ ಇದು ಮೊದಲ ಅನುಭವ. ಈ ಚಿತ್ರದ ಕಥೆ ಹಾಗೂ ಹಾಸ್ಯ ಪಾತ್ರಗಳು ಅತ್ಯುತ್ತಮವಾಗಿದ್ದು ಪ್ರೇಕ್ಷಕರು ಇಷ್ಟಪಡುವಂತಹ ಮದರ್ ಸೆಂಟಿಮೆಂಟ್ ಹಾಗೂ ಲವ್‌ಸ್ಟೋರಿ ಇದೆ ಎಂದರು.
ನಟ ರಾಜೇಶ್ ಸ್ಕೈಲಾರ್ಕ್, ಸಹ ನಿರ್ದೇಶಕ ಸಂತೋಷ್ ಶೆಣ್ಯೆ ಹಾಗೂ ಸಹ ನಿರ್ಮಾಪಕ ರಿಚರ್ಡ್ ಕಾರ್ಕಳ ಉಪಸ್ಥಿತರಿದ್ದರು.