×
Ad

ಮನಪಾ ಸ್ಥಾಯಿ ಸಮಿತಿಗೆ ಪ್ರವೀಣ್‌ಚಂದ್ರ ಆಳ್ವ ಆಯ್ಕೆ

Update: 2018-03-21 20:06 IST

ಮಂಗಳೂರು, ಮಾ.21: ಮಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿ ಮತ್ತು ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಮನಪಾ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಆಯ್ಕೆಯಾಗಿದ್ದಾರೆ. 

ಮಾರ್ಚ್ 19ರಂದು ಈ ಆಯ್ಕೆ ನಡೆದಿದೆ. ಇದಲ್ಲದೆ ಇತರ ಮೂವರು ಮನಪಾ ಸದಸ್ಯರು ಕೂಡ ಸ್ಥಾಯಿ ಸಮಿತಿಗೆ ಆಯ್ಕೆಯಾಗಿದ್ದಾರೆ. ರಾಧಾಕೃಷ್ಣ ಅವರು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ, ಲತಾ ಸಾಲ್ಯಾನ್ ಅವರು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಹಾಗೂ ನವೀನ್ ಡಿಸೋಜಾ ಆರೋಗ್ಯ ಮತ್ತು ನೈರ್ಮಲ್ಯ ಸ್ಥಾಯಿ ಸಮಿತಿಗೆ ಅಧ್ಯಕ್ಷರುಗಳಾಗಿ ಆಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News