ಎ. 6ರಂದು ಎಲ್ಲೂರಿನಲ್ಲಿ ಆಧ್ಯಾತ್ಮಿಕ ಮಜ್ಲಿಸ್
Update: 2018-03-21 20:08 IST
ಮಂಗಳೂರು, ಮಾ. 21: ಎಲ್ಲೂರಿನ ದಾರುಲ್ ಅಮಾನ್ ಎಜುಕೇಶನ್ ಅಕಾಡಮಿ ವತಿಯಿಂದ ಪ್ರತಿ ತಿಂಗಳ ಮಜ್ಲಿಸ್ ಕಾರ್ಯಕ್ರಮದಂತೆ ಮುಂದಿನ ತಿಂಗಳ ಎ. 6ರಂದು ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಧಾರ್ಮಿಕ ಶಿಬಿರ ಎಲ್ಲೂರಿನ ಹಿರಾನಗರದಲ್ಲಿ ನಡೆಯಲಿದೆ.
ಅಕಾಡಮಿಯ ಮುಖ್ಯಸ್ಥ ಅಲ್‌ಹಾಜ್ ಸಲೀಂ ಮದನಿ ಕುತ್ತಾರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಉಸ್ಮಾನ್ ಮದನಿ ನೇಜಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್‌ಹಾಜ್ ಸಲೀಂ ಮದನಿ ಅವರ ನೇತೃತ್ವದಲ್ಲಿ ತಿಂಗಳಿಗೊಮ್ಮೆಯಂತೆ ಕಳೆದ ಹಲವು ತಿಂಗಳುಗಳಿಂದ ಮಜ್ಲಿಸ್ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ.