ಬಂಟ್ವಾಳ: ವಿವಿಧ ಗ್ರಾಮಗಳಲ್ಲಿ ಕಡಿಯುವ ನೀರಿನ ಸಮಸ್ಯೆ
ಬಂಟ್ವಾಳ, ಮಾ. 21: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿರುವ ತೊಂದರೆಗಳನ್ನು ಆದಷ್ಟು ಬೇಗ ಸರಿಪಡಿಸಿ, ಜನರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಾಲೂಕು ಮಟ್ಟದ ಸಭೆಯಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ, ತಾಲೂಕಿನ ಯಾವುದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು. ನೀರಿನ ಸಮಸ್ಯೆಯ ದೂರು ಬರದ ರೀತಿಯಲ್ಲಿ ಪಿಡಿಒ ಅವರು ಕೇಂದ್ರ ಸ್ಥಾನದಲ್ಲಿ ನಿಂತು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಅಲ್ಲದೆ, ಜಿಲ್ಲೆಯ ಯಾವುದೇ ತಾಲೂಕಿನಲ್ಲಿರದ ವಿದ್ಯುತ್ ವ್ಯತ್ಯಯ ಬಂಟ್ವಾಳದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿದೆ. ಇದರಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಮೆಸ್ಕಾಂ ಅಧಿಕಾರಿಗಳು ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದರು.
ಈ ಸಂದರ್ಭ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನರಿಂಗಾಣ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಕೊರತೆ ಕಾಣಿಸುತ್ತಿದೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಾರ್ವಜನಿಕರಿಗೆ ನೀರಿಲ್ಲ ಎಂಬ ಭಾವನೆ ಬರಬಾರದು. ಅನಿವಾರ್ಯ ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕವಾದರೂ ನೀರು ಒದಗಿಸುವ ಕುರಿತು ಗ್ರಾಮಮಟ್ಟದಲ್ಲೇ ವ್ಯವಸ್ಥೆ ಮಾಡಿಸಿಕೊಳ್ಳಬೇಕು. ಇವನ್ನು ಪಿಡಿಒಗಳು ಮೇಲ್ವಿಚಾರಣೆ ಮಾಡಬೇಕು.
ಪ್ರತಿದಿನದ ಮಾಹಿತಿಯನ್ನು ತನಗೆ ನೀಡಬೇಕು. ಈ ಕುರಿತು ಟಾಸ್ಕ್ ಫೋರ್ಸ್ ರಚನೆಯಾಗಿದ್ದು, ತಹಶೀಲ್ದಾರ್, ಎಇಇ ಮತ್ತು ಇಒ ಮೇಲ್ವಿಚಾರಣೆಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಎಲ್ಲ ಪಿಡಿಒಗಳು ನೀರಿನ ಕುರಿತು ಯಾವುದೇ ದೂರು ಬಂದರೂ ಅದಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪಂಪ್ ಕಡ್ಡಾಯ:
ಪ್ರತಿಯೊಂದು ಗ್ರಾಪಂಗಳಲ್ಲೂ ಹೆಚ್ಚುವರಿ ಪಂಪ್ ಸೆಟ್‌ಗಳು ಕಡ್ಡಾಯವಾಗಿ ಇರಬೇಕು ಎಂದು ಸೂಚನೆ ನೀಡಿದ ತಾಪಂ ಇಒ, 14ನೆ ಹಣಕಾಸು ಯೋಜನೆಯಡಿ ಇದಕ್ಕೆ ತಕ್ಷಣ ಹಣಕಾಸಿನ ನೆರವು ಮಂಜೂರಾಗುತ್ತದೆ ಎಂದರು.
ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್‌ನ ಪಿಡಿಒಗಳು ತಮ್ಮ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಸೆಳೆದು ನೀರು ಪೂರೈಕೆಗೆ ಕೊಳವೆ ಬಾವಿಯ ಅಗತ್ಯವಿದೆ ಎಂದರು.
ಎಲ್ಲೆಲ್ಲಿ ನೀರಿನ ಸಮಸ್ಯೆ?
ಮೇರಮಜಲು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಸದರೂ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಈ ಭಾಗದ ಜನರಿಗೆ ಕೊಳವೆಬಾವಿಯ ಅಗತ್ಯವಿದೆ ಎಂದು ಇಲ್ಲಿನ ಪಿಡಿಒ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ರಾಜಣ್ಣ ಅವರು, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ 14ನೆ ಹಣಕಾಸು ಯೋಜನೆಯಲ್ಲಿ ಅನುದಾನ ಮೀಸಲಿಡಲಾಗಿದೆ. ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು ಕೊಳವೆಬಾವಿ ನಿರ್ಮಿಸಬಹುದು. ಅಲ್ಲದೆ ಆ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆಗಳು ಇದ್ದರೆ ಅವರ ಅನುಮತಿ ಪಡೆದು ಮೂರು ತಿಂಗಳಿಗೆ ಮಟ್ಟಿಗೆ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು, ಪಶ್ಚಿಮ ವಾಹಿನಿ ಯೋಜನೆಯಡಿ ಪುಚ್ಚೆಮುಗೇರ್‌ನಲ್ಲಿ ಮೂರು ಕಿಂಡಿ ಅಣೆಕಟ್ಡು ನಿರ್ಮಾಣವಾಗಲಿದ್ದು, ಮುಂದಿನ ವರ್ಷದಿಂದ ಸಂಗಬೆಟ್ಟು ಬಹುಗ್ರಾಮ ಯೋಜನೆಯಿಂದ ನೀರು ಪೂರೈಕೆಗೆ ಸಮಸ್ಯೆಯಾಗದು, ಹಾಗೆಯೇ ಕರೋಪಾಡಿ ಯೋಜನೆಗೂ ವಿದ್ಯುತ್ ಸಂಪರ್ಕದ ಸಮಸ್ಯೆ ಪರಿಹರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗೆ ಸೂಚಿಸಿದರು. ಇಂಜಿನಿಯರ್‌ಗಳು, ಮೆಸ್ಕಾಂ ಅಧಿಕಾರಿಗಳು, ಗುತ್ತಿಗೆದಾರರು, ಪಂಚಾಯತ್ ಪಿಡಿಒ, ಜನಪ್ರತಿನಿಧಿಗಳ ಜೊತೆಯಾಗಿ ಬಹುಗ್ರಾಮಕುಡಿಯುವ ನೀರಿನ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಯನ್ನು ಪರಿಶೀಲಿಸುವಂತೆ ಸಚಿವರು ಸೂಚನೆ ನೀಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ನರೇಂದ್ರಬಾಬು, ಕಿರಿಯ ಇಂಜಿನಿಯರ್‌ರಾದ ಕೃಷ್ಣ ಮಾನಪ್ಪ, ಅಜಿತ್ ಕೆ.ಎನ್, ರವಿಚಂದ್ರ, .ಎ.ನಾಗೇಶ್ ,ಮೆಸ್ಕಾಂನ ಇಇ ಉಮೇಶ್ಚಂದ್ರ, ಎಇಇ ನಾರಾಯಣ ಭಟ್ ಹಾಗೂ ತಾಲೂಕಿನ ಪಿಡಿಒಗಳು ಹಾಜರಿದ್ದರು.
ತಾಪಂ ಇಒ ರಾಜಣ್ಣ ಸ್ವಾಗತಿಸಿ,ವಂದಿಸಿದರು.
ಫಲ್ಗುಣಿಯಲ್ಲಿ ನೀರಿನ ಕೊರತೆ:
ಸಂಗಬೆಟ್ಟು ಗ್ರಾಮದ ಪುಚ್ಚೆಮೊಗರುವಿನ ಫಲ್ಗುಣಿ ನದಿ ನೀರನ್ನು ಆಭಾಗದಲ್ಲಿ ಕೃಷಿಗೆ ಬಳಸುತ್ತಿರುವುದರಿಂದ ನೀರಿನ ಕೊರತೆ ಇದ್ದು, ಸಂಗಬೆಟ್ಟು ಬಹುಗ್ರಾಮ ಯೋಜನೆಯಿಂದ ಕುರಿಯಾಳ,ಅಮ್ಟಾಡಿ ಭಾಗಗಳಿಗೆ ನೀರು ಪೂರೈಕೆಗೆ ಸಮಸ್ಯೆಯಾದರೆ,ಪವರ್ ಪ್ರಾಬ್ಲಂ ನಿಂದ ಕರೋಪಾಡಿ ಬಹುಗ್ರಾಮ ಯೋಜನೆಯಿಂದ ಕನ್ಯಾನ ಭಾಗಕ್ಕೆ ನೀರು ಪೂರೈಕೆ ಸಾಧ್ಯವಾಗಿಲ್ಲ ಎಂದು ಇಂಜಿನಿಯರ್‌ಗಳು ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು, ಪಶ್ಚಿಮ ವಾಹಿನಿ ಯೋಜನೆಯಡಿ ಪುಚ್ಚೆಮುಗೇರ್‌ನಲ್ಲಿ ಮೂರು ಕಿಂಡಿ ಅಣೆಕಟ್ಡು ನಿರ್ಮಾಣವಾಗಲಿದ್ದು,ಮುಂದಿನ ವರ್ಷದಿಂದ ಸಂಗಬೆಟ್ಟು ಬಹುಗ್ರಾಮ ಯೋಜೆಯಿಂದ ನೀರು ಪೂರೈಕೆಗೆ ಸಮಸ್ಯೆಯಾಗದು,ಹಾಗೆಯೇ ಕರೋಪಾಡಿ ಯೋಜನೆಗೂ ವಿದ್ಯುತ್ ಸಂಪರ್ಕದ ಸಮಸ್ಯೆ ಪರಿಹರಿಸಲಿ ಮೆಸ್ಕಾಂ ಅಧಿಕಾರಿಗೆ ಸೂಚಿಸಿದರು.
ಇಂಜಿನಿಯರ್‌ಗಳು, ಮೆಸ್ಕಾಂ ಅಧಿಕಾರಿಗಳು,ಗುತ್ತಿಗೆದಾರರು, ಪಂಚಾಯತ್ ಪಿಡಿಒ, ಜನಪ್ರತಿನಿಧಿಗಳ ಜೊತೆಯಾಗಿ ಬಹುಗ್ರಾಮಕುಡಿಯುವ ನೀರಿನ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಯನ್ನು ಪರಿಶೀಲಿಸುವಂತೆ ಸಚಿವರು ನಿರ್ದೇಶನ ನೀಡಿದರು.