×
Ad

ಮಾ. 29: ಗುರುಕಂಬಳ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲರ ಉದ್ಯೋಗ ಮೇಳ

Update: 2018-03-21 23:52 IST

ಮಂಗಳೂರು, ಮಾ. 21: ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಮಾ. 29ರಂದು ಬೆಳಗ್ಗೆ 9 ಗಂಟೆಗೆ ಗುರುಕಂಬಳ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲರ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಅಂಗವಿಕಲ ಮತ್ತು ಬಡ ಅಭ್ಯರ್ಥಿಗಳ ಉಚಿತ ಕೌಶಲ್ಯ ತರಬೇತಿಯೊಂದಿಗೆ ಶೇ. 100 ಉದ್ಯೋಗ ಅವಕಾಶ ಮಾಡಿಕೊಡಲಾಗುವುದು. ಬೇಸಿಕ್ ಇಂಗ್ಲಿಷ್, ಜೀವನ ಕೌಶಲ್ಯಗಳು, ರೀಟಲ್ ಮ್ಯಾನೇಜ್‌ಮೆಂಟ್, ಬೇಸಿಕ್ ಕಂಪ್ಯೂಟರ್ ಹಾಗೂ ಸಂದರ್ಶನ ಕೌಶಲ್ಯಗಳು ವಿಷಯಗಳಲ್ಲಿ ತರಬೇತಿ ನೀಡಲಾಗುವುದು.

ತರಬೇತಿಯು 45 ದಿನಗಳದ್ದಾಗಿದ್ದು, ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಅರ್ಹತೆಗಳು: ವಯೋಮಿತಿ 18ರಿಂದ 35 ವರ್ಷ. ಅಂಗವಿಕಲರ ಗುರುತಿನ ಚೀಟಿ ಕಡ್ಡಾಯ. ಐ.ಡಿ. ಎರಡು ಪಾಸ್‌ಪೋರ್ಟ್ ಸೈಝ್ ಭಾವಚಿತ್ರ. ಆಸಕ್ತರು ಟಿ.ಎಂ. ಇರ್ಫಾನ್ (ಮಾಜಿ ಅಧ್ಯಕ್ಷರು ಪ.ಪೆರಾರ ಗ್ರಾಮ ಪಂಚಾಯತ್) 9035647251, 9743678925 ವರದರಾಜ್ 9964585148, ಎಫ್.ಎಂ. ಶರೀಫ್ ಸಾಮಾಜಿಕ ಕಾರ್ಯಕರ್ತ 9902876951 ಅವರ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News