​ಪೋರ್ಜರಿ ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ ಸಾಲ ಪಡೆದು ವಂಚನೆ

Update: 2018-03-21 18:26 GMT

ಮಂಗಳೂರು, ಮಾ. 21: ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನಿಂದ 25 ಲಕ್ಷ ರೂ. ಸಾಲ ಮಂಜೂರು ಮಾಡಿಸಿ ವಂಚಿಸಲಾಗಿದೆ ಎಂದು ಬ್ಯಾಂಕ್‌ನ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಂಧ್ರ ಬ್ಯಾಂಕ್ ಬಿಜೈ ಶಾಖೆಯ ಮಾಜಿ ಮ್ಯಾನೇಜರ್ ಮಂಜುನಾಥ ಪ್ರಸಾದ್, ಕುಡುಪಾಡಿಯ ಬಾಲಕೃಷ್ಣ ಸುವರ್ಣ, ಉಳ್ಳಾಲದ ಉಳ್ಳಾಲಬೈಲ್ ನಿವಾಸಿ ಲವಿನಾ ಲಿನೆಟ್ ಎಂಬವರು ಪ್ರಕರಣದ ಆರೋಪಿಗಳಾಗಿದ್ದಾರೆ.

ಬಾಲಕೃಷ್ಣ ಸುವರ್ಣ ಮತ್ತು ಲವಿನಾ ಲಿನೆಟ್ ಅವರು ಆಂಧ್ರ ಬ್ಯಾಂಕ್ ಬಿಜೈ ಶಾಖೆಯ ಮಾಜಿ ಮ್ಯಾನೇಜರ್‌ ಮಂಜುನಾಥ ಪ್ರಸಾದ್ ಅವರನ್ನು ಸಂಪರ್ಕಿಸಿ 25 ಲಕ್ಷ ರೂ.ವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್.ಕೆ.ಕ್ಯಾಟರಿಂಗ್ಸ್ ಪಾರ್ಟ್ನರ್ಸ್‌ಶಿಪ್ ಫರ್ಮ್‌ನ ಖಾತೆಯನ್ನು ತೆರೆದು ಅದಕ್ಕೆ ಯಾವುದೇ ಆಸ್ತಿ, ಸೆಕ್ಯುರಿಟಿಯನ್ನು ಪಡೆಯದೆ 25 ಲಕ್ಷ ರೂ. ಸಾಲವನ್ನು ಮಂಜೂರು ಮಾಡಿಸಲಾಗಿದೆ. ಆರೋಪಿಗಳು ಖಾತೆಗೆ ಹಣವನ್ನು ವರ್ಗಾಯಿಸಲು ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಸಾಲ ಮಂಜೂರು ಮಾಡಿಸಿಕೊಂಡ ಆರೋಪಿಗಳು ಬಳಿಕ ಸಾಲವನ್ನು ಮರುಪಾವತಿ ಮಾಡದೆ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಬ್ಯಾಂಕ್‌ನ ಮ್ಯಾನೇಜರ್ ಅನುರಾಗ್ ಕುಮಾರ್ ಅವರು ಇಕಾನಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಮ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News