ಜಾನಪದದ ವಿವೇಕ ಎಲ್ಲ ಕಾಲಕ್ಕೂ ಮಾನ್ಯ: ಡಾ.ಕಾಳೇಗೌಡ ನಾಗವಾರ

Update: 2018-03-24 16:13 GMT

ಉಡುಪಿ, ಮಾ. 24: ಜಾನಪದದ ವಿವೇಕ ಎಲ್ಲ ಕಾಲಕ್ಕೂ ಮಾನ್ಯವಾದುದು. ಜಾನಪದ ಪರಂಪರೆಯಲ್ಲಿರುವ ಜ್ಞಾನ ಹಾಗೂ ಚಿಂತನೆ ಬಹಳ ಮುಖ್ಯ ವಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಜಾನಪದ ವಿದ್ವಾಂಸ ಡಾ.ಕಾಳೇ ಗೌಡ ನಾಗವಾರ ಹೇಳಿದ್ದಾರೆ.

ಉಡುಪಿ ಕೆಮ್ಮಲಜೆ ಜಾನಪದ ಪ್ರಕಾಶನದ ವತಿಯಿಂದ ಶನಿವಾರ ಉಡುಪಿ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡುತಿ ದ್ದರು.

ಮಠ ಮಂದಿರಗಳಲ್ಲಿ ಪಂಕ್ತಿಭೇಧ ಆಚರಿಸಲಾಗುತ್ತಿದೆ. ಮೂಢನಂಬಿಕೆಗಳು ಈಗಲೂ ಆಚರಣೆಯಲ್ಲಿವೆ. ಚರ್ಮ ರೋಗ ನಿವಾರಣೆಗೆ ವಿದ್ಯಾವಂತರೇ ಎಂಜಲಿನ ಮೇಲೆ ಉರುಳಾಡುತ್ತಾರೆ. ವಿವೇಕ ಅವಿವೇಕಗಳೆಲ್ಲವೂ ಒಂದಾ ಗಿವೆ. ಹೀಗಾಗಿ ಮೊದಲು ನಮ್ಮ ಮನಸ್ಸಿನ ಪರಿಶುದ್ಧತೆ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ರಾಜಕಾರಣಿಗಳು ಶ್ರಮ ಜೀವಿಗಳ ರಕ್ತ ಹೀರುವ ಜಿಗಣೆಗಳು. ಕೊಲ್ಲುವುದ ರಿಂದ ಯಾರು ಕೂಡ ದೊಡ್ಡವರಾಗುವುದಿಲ್ಲ. ಜನಾಂಗ ಧ್ವೇಷಿಗಳನ್ನು ಪ್ರೊತ್ಸಾಹಿ ಸುವ ಕೆಲಸ ಮಾಡಬಾರದು ಎಂದ ಅವರು, ಈ ಜಗತ್ತಿನಲ್ಲಿದ್ದ ಮಾತೃ ಪ್ರಧಾನ ವ್ಯವಸ್ಥೆಯನ್ನು ಸೃಜನಶೀಲವಲ್ಲದ ಮನಸ್ಸುಗಳು ಕಾಲಕ್ರಮೇಣ ಪಿತೃ ಪ್ರಧಾನವ ನ್ನಾಗಿ ಪರಿವರ್ತಿಸಿತು ಎಂದರು.
ಇಂದು ಭಾರತೀಯರ ಮನಸ್ಸು ಕ್ರೂರವಾಗುತ್ತಿದೆ. ಹೆತ್ತ ತಾಯಿಯನ್ನೇ ಹತ್ಯೆ ಮಾಡಲಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ವಿಧವೆ ಎಂಬ ಕಾರಣಕ್ಕೆ ಮಹಿಳೆಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗುತ್ತದೆ. ಅಸ್ಪಶ್ಯತೆ ಈಗಲೂ ಜೀವಂತ ಇದೆ. ಇತ್ತೀಚಿನ ವರೆಗೂ ಬಿಲ್ಲವರು ಕರಾವಳಿಯಲ್ಲಿ ಅಸ್ಪಶ್ಯರಾಗಿದ್ದರು ಎಂದು ಅವರು ತಿಳಿಸಿದರು.

ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಜಾನಪದ ಸಂಶೋಧಕ ಮುದ್ದು ಮೂಡು ಬೆಳ್ಳೆ, ಜಾನಪದ ಕಲಾವಿದ ಪ್ರಶಸ್ತಿಯನ್ನು ಕುಂಬಾರಿಕೆ ಕಲೆ ಪರಿಣತ ಬೊಗ್ಗು ಕುಲಾಲ್ ಅವರಿಗೆ ಪ್ರದಾನ ಮಾಡಲಾಯಿತು. ಹವ್ಯಾಸಿ ಯಕ್ಷಗಾನ ಕಲಾವಿದ ಕೇಶವಮೂರ್ತಿ ಬೆಲ್ಪತ್ರೆ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಪ್ರಕಾಶನದ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ವಹಿಸಿದ್ದರು. ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ, ತುಳುಕೂಟದ ಅಧ್ಯಕ್ಷ ಜಯ ಕರ ಶೆಟ್ಟಿ ಇಂದ್ರಾಳಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಡಾ.ದುಗ್ಗುಪ್ಪ ಕಜೆಕಾರ್ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ನವೀನ್ ಅಮೀನ್ ತೋನ್ಸೆ ವಂದಿಸಿದರು. ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News