ಉಡುಪಿಯ ಯುವಕ ದುಬೈಯಲ್ಲಿ ಆತ್ಮಹತ್ಯೆ
Update: 2018-03-25 23:38 IST
ಉಡುಪಿ, ಮಾ.25: ಉಡುಪಿಯ ಯುವಕನೋರ್ವ ದುಬೈಯಲ್ಲಿ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಉಡುಪಿಯ ಕೊಳಂಬೆ ನಿವಾಸಿ ರಾಘವೇಂದ್ರ ಭಂಡಾರಿ (35) ಎಂದು ಗುರುತಿಸಲಾಗಿದೆ.
ದುಬೈಯ ಹೋಟೆಲೊಂದರಲ್ಲಿ ತಂಗಿದ್ದ ರಾಘವೇಂದ್ರ ವೈಯಕ್ತಿಕ ಕಾರಣದಿಂದ ಮನನೊಂದು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮುನ್ನ ಊರಿನಲ್ಲಿರುವ ಸಹೋದರರಿಗೆ ಕರೆ ಮಾಡಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಕಳೆದ ಹಲವು ವರ್ಷಗಳಿಂದ ದುಬೈಯಲ್ಲಿ ದುಡಿಯುತ್ತಿದ್ದ ಅವರು ಇತ್ತೀಚೆಗಷ್ಟೆ ಮದುವೆಯಾಗಿದ್ದರು. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ.