ವೆಲೆನ್ಸಿಯಾ: ಮನಪಾ ವಾರ್ಡ್ ಕಚೇರಿ ಸಂಕೀರ್ಣ ಉದ್ಘಾಟನೆ

Update: 2018-03-26 05:37 GMT

ಮಂಗಳೂರು, ಮಾ.26: ನಗರದ ಕಂಕನಾಡಿ-ವೆಲೆನ್ಸಿಯಾ ಮನಪಾ ವಾರ್ಡ್ ಕಚೇರಿ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ನಡೆಯಿತು.

ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಕಚೇರಿ-ಸಂಕೀರ್ಣವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ವಾರ್ಡ್‌ನ ಕಚೇರಿಯು ತೀರಾ ಹಳೆಯದ್ದಾಗಿತ್ತು. ಅಲ್ಲದೆ ಇಕ್ಕಟ್ಟಿನಿಂದ ಕೂಡಿತ್ತು. ಸಾರ್ವಜನಿಕರಿಂದ ಇದರಿಂದ ತುಂಬಾ ಸಮಸ್ಯೆಯೂ ಆಗುತ್ತಿತ್ತು. ಇದನ್ನು ಮನಗಂಡು ವಿಶೇಷ ಆದ್ಯತೆ ನೀಡಿ ಕಡಿಮೆ ಅವಧಿಯಲ್ಲಿ ವಾರ್ಡ್ ಕಚೇರಿ-ಸಂಕೀರ್ಣವನ್ನು ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭ ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಜೆಸಿಂತಾ ವಿಜಯಾ ಆಲ್ಫ್ರೆಡ್, ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News