×
Ad

ಮಾ.29ರಿಂದ 31ರವರೆಗೆ ಆದಾಯ ತೆರಿಗೆ ಕಚೇರಿಗಳಿಗೆ ರಜೆ ಇಲ್ಲ

Update: 2018-03-27 19:22 IST

ಹೊಸದಿಲ್ಲಿ, ಮಾ.27: ಈ ಆರ್ಥಿಕ ವರ್ಷಾಂತ್ಯದೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಮಾರ್ಚ್ 29ರಿಂದ 31ರವರೆಗೆ ರಜಾದಿನದಲ್ಲೂ ಆದಾಯ ತೆರಿಗೆ ಕಚೇರಿಗಳು ಹಾಗೂ ‘ಆಯಕರ್ ಸೇವಾ ಕೇಂದ್ರ(ಎಎಸ್‌ಕೆ)ಗಳು ಕಾರ್ಯಾಚರಿಸಲಿವೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ.

  2016-17 ಮತ್ತು 2017-18 ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ಸ್‌ಗಳ ವಿಳಂಬ ಸಲ್ಲಿಕೆಗೆ ಹಾಗೂ 2016-17ರ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆಗೆ 2018ರ ಮಾರ್ಚ್ 31 ಅಂತಿಮ ದಿನವಾಗಿದೆ. ಈ ಪ್ರಕ್ರಿಯೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೇಶದಾದ್ಯಂತದ ಎಲ್ಲಾ ಆದಾಯ ತೆರಿಗೆ ಕಚೇರಿಗಳು ಮಾ.29ರಿಂದ 31ರವರೆಗೆ ರಜಾದಿನದಲ್ಲೂ ತೆರೆದಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾ.29ರಂದು ಮಹಾವೀರ ಜಯಂತಿ ಮತ್ತು 30ರಂದು ಗುಡ್‌ಫ್ರೈಡೇ ಪ್ರಯುಕ್ತ ರಜೆಯಾಗಿದ್ದರೆ, ಮಾ.31 ಆರ್ಥಿಕ ವರ್ಷದ ಅಂತಿಮ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News