×
Ad

ಟಿವಿ ಕಲಾವಿದ ಕರಣ್ ಪರಾಂಜಪೆ ನಿಧನ

Update: 2018-03-27 19:26 IST

ಮುಂಬೈ, ಮಾ.27: ಕಿರುತೆರೆಯ ‘ದಿಲ್ ಮಿಲ್ ಗಯೆ’ ಕಾರ್ಯಕ್ರಮದಿಂದ ಜನಪ್ರಿಯನಾಗಿದ್ದ ನಟ ಕರಣ್ ಪರಾಂಜಪೆ (26 ವರ್ಷ) ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಕರಣ್ ಸಾವಿಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ. ತಾಯಿಯೊಂದಿಗೆ ವಾಸಿಸುತ್ತಿದ್ದ ಕರಣ್ ಮಾ.25ರಂದು ನಿದ್ದೆಯಲ್ಲೇ ಇಹಲೋಕ ತ್ಯಜಿಸಿರುವುದಾಗಿ ಮಾಹಿತಿಯಿದೆ. ಅವರ ಅಂತಿಮ ಕ್ರಿಯೆಯಲ್ಲೂ ಭಾಗಿಯಾಗಲು ಆಗಲಿಲ್ಲ ಎಂದು ‘ದಿಲ್ ಮಿಲ್ ಗಯೆ’ ಕಾರ್ಯಕ್ರಮದ ಸಹ ಕಲಾವಿದ ಸೆಹ್ಬಾನ್ ಅಝಿಮ್ ತಿಳಿಸಿದ್ದಾರೆ. ಅಲ್ಲದೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪರಾಂಜಪೆ ಜತೆಗಿರುವ ಫೋಟೋ ಹಾಕಿರುವ ಅಝಿಮ್ ‘ ಬಹಳ ಬೇಗ ಹೊರಟುಹೋದೆ ನನ್ನ ಗೆಳೆಯ. ನಿನ್ನ ನೆನಪು ಸದಾ ನನ್ನೊಂದಿಗಿದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಂತಾಪ ಕೋರಿದ್ದಾರೆ. ಮತ್ತೋರ್ವ ಸಹನಟ ಕರಣ್ ವಾಹಿ ಕೂಡಾ ಅಗಲಿದ ಸಹನಟನಿಗೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News