ಎ.1ರಿಂದ ಫಾ.ಮುಲ್ಲಾರ್ ಆಸ್ಪತ್ರೆಯಲ್ಲಿ ವಿಶೇಷ ತಪಾಸಣಾ ಶಿಬಿರ
Update: 2018-03-27 20:00 IST
ಮಂಗಳೂರು, ಮಾ. 27: ಫಾದರ್ ಮುಲ್ಲಾರ್ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಪಿತ್ತಕೋಶ (ಲಿವರ್), ಮೂತ್ರಕೋಶದ ಸಮಸ್ಯೆ, ಮೇದೋಜಿರಕ ಗ್ರಂಥಿಯ ಸಮಸ್ಯೆ(ಪ್ಯಾಂಕ್ರಿಯಸ್)ರೋಗದಿಂದ ಬಳಲುತ್ತಿರುವವರಿಗೆ ರಿಯಾಯಿತಿ ದರದಲ್ಲಿ ಎಪ್ರಿಲ್ 1ರಿಂದ 30ರವರೆಗೆ ತಪಾಸಣಾ ಶಿಬಿರ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು.
ಮೇಲಿನ ರೋಗಗಕ್ಕೆ ಸಂಬಂಧಿಸಿದಂತೆ ವಿಶೇಷ ತಜ್ಞ ವೈದ್ಯರು ತಪಾಸಣೆ ಮತ್ತು ಚಿಕಿತ್ಸೆ ನಿಡಲಿದ್ದಾರೆ. ಮಾಹಿತಿ ಮತ್ತು ವಿಚಾರಣೆಗಾಗಿ ದೂರವಾಣಿ ಸಂಖ್ಯೆ 0824-2238297,ಸರ್ಜರಿ ವಿಭಾಗ ಒಪಿಡಿ,ಅಥವಾ 0824-2238190 ಸರ್ಜರಿ ಒಪಿಡಿ ವಿಭಾವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.