×
Ad

ಮಂಗಳೂರು: ​ಆ್ಯಮ್‌ವೇ ಇಂಡಿಯಾದಿಂದ ನ್ಯೂಟ್ರಿಲೇಟ್‌ಶ್ರೇಣಿಯ 4 ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ

Update: 2018-03-27 20:08 IST

ಮಂಗಳೂರು, ಮಾ. 27:ಆ್ಯಮ್ ವೇ ಇಂಡಿಯಾ ನೇರ ಮಾರಾಟದ ಎಫ್‌ಎಂಸಿಜಿ ಕಂಪೆನಿ ನ್ಯೂಟ್ರಿಲೈಟ್ ಟ್ರೆಡಿಶನಲ್ ಹರ್ಬ್ಸ್ ರೇಂಜ್‌ನ ಹೊಸ ಶ್ರೇಣಿಯ ನ್ಯೂಟ್ರಿಲೈಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಆಮ್‌ವೇ ಇಂಡಿಯಾದ ಉತ್ತರ ಮತ್ತು ದಕ್ಷಿಣ ಭಾರತ ವಿಭಾಗದ ಹಿರಿಯ ಉಪಾಧ್ಯಕ್ಷ ಗುರುಶರಣ್ ಚೀಮಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅವಸರದ ಬದುಕಿನಲ್ಲಿ ಆರೋಗ್ಯ ಜೀವನದ ಬಗ್ಗೆ ಗಮನಹರಿಸುವುದು ಮುಖ್ಯ ಈ ನಿಟ್ಟಿನಲ್ಲಿ ಭಾರತೀಯ ಸಾಂಪ್ರದಾಯಿಕ ಜ್ಞಾನದ ಮೇಲೆ ಅವಲಂಬಿತವಾಗಿರುವ ದೇಹ ಶಾರೀರಿಕ ಸವಾಲುಗಳನ್ನು ಎದುರಿಸಲು ಆರೋಗ್ಯ ವರ್ಧಕ ಅಂಶಗಳನ್ನು ಹೊಂದಿರುವ ಆಮ್‌ವೇ ನ್ಯೂಟ್ರಿಲೈಟ್ ಟ್ರೆಡಿಶನಲ್ ಹರ್ಬ್ಸ್ ಉತ್ಪನ್ನಗಳು ಸಹಕಾರಿಯಾಗಲಿವೆ. ಈ ಶ್ರೇಣಿಯು 4 ಉತ್ಪನ್ನಗಳನ್ನು ಒಳಗೊಂಡಿದ್ದು ನ್ಯೂಟ್ರಿಲೈಟ್ ತುಳಸಿ, ನ್ಯೂಟ್ರಿಲೈಟ್ ಬ್ರಾಹ್ಮೀ, ನ್ಯೂಟ್ರಿಲೈಟ್ ಅಶ್ವಗಂಧ ಮತ್ತು ನ್ಯೂಟ್ರಿಲೈಟ್ ಅಮಲಕಿ, ವಿಪೀಟಕಿ ಮತ್ತು ಹರೀಟಕಿ ಮತ್ತು ಆ್ಯಮ್‌ವೇ ನ್ಯೂಟ್ರಿಲೈಟ್ ಟ್ರೇಡಿಶನಲ್ ಹರ್ಬ್ಸ್ ಶ್ರೇಣಿಯ ಸಾವಯವ ಪ್ರಮಾಣಿತ ಮೂಲಿಕೆಗಳು ಮತ್ತು ಡಿಎನ್‌ಎ ಫಿಂಗರ್ ಪ್ರಿಂಟ್ ಹೊಂದಿರುವ ಮೂಲಿಕೆಗಳ ಸಂಯೋಜಿತ ಪ್ರಯೋಜನಗಳನ್ನು ನೀಡುತ್ತದೆ.

ಹೊಸ ಶ್ರೇಣಿಯ ಪ್ರತಿ ಉತ್ಪನ್ನಗಳ 60 ಮಾತ್ರೆಗಳ ಒಂದು ಬಾಟಲಿಗೆ 649 ರೂ ಆಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ ನಿಗದಿಗೊಳಿಸಿರುವ 2016ರ ನ್ಯೂಟ್ರಾಸ್ಯುಟಿಕಲ್ ನಿಬಂಧನೆಗಳಿಗೆ ಬದ್ಧವಾಗಿದೆ ಎಂದು ಗುರು ಶರಣ್ ತಿಳಿಸಿದ್ದಾರೆ.

ಆ್ಯಮ್‌ವೇ ನ್ಯೂಟ್ರಿಲೈಟ್ ಸಾಂಪ್ರದಾಯಿಕ ಮೂಲಿಕಾ ಶ್ರೇಣಿಯ ,ದೇಶೀಯ ಪಾರಂಪರಿಕ ವೈದ್ಯ ಪದ್ಧತಿಗೆ ಪೂರಕವಾಗಿ ಭಾರತೀಯ ಗ್ರಾಹಕರ ಪೋಷಣೆಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸಲಾಗಿದೆ.ಭಾರತೀಯ ಮಾರುಕಟ್ಟೆಗೆ ಪೂರಕವಾಗಿ ದೇಶೀಯವಾಗಿ ಈ ಉತ್ಪನ್ನ ಅಭಿವೃದ್ಧಿ ಪಡಿಸಲಾಗಿದೆ. ವಿಟಮಿನ್ ಮತ್ತು ಆಹಾರ ಪೂರಕಗಳ ಮಾರುಕಟ್ಟೆ ಗಾತ್ರ 8400 ಕೋಟಿ ರೂ. ಆಗಿದ್ದು, ಮುಂದಿನ ಐದು ವರ್ಷದಲ್ಲಿ ಶೇ 10ರಷ್ಟು ಬೆಳವಣಿಗೆ ಸಾಧಿಸಲಿದೆ. ಆ್ಯಮ್‌ವೇ ನ್ಯೂಟ್ರಿಲೈಟ್ ಮಾರುಕಟ್ಟೆ ಕ್ಷೇತ್ರದಲ್ಲಿ ಶೇ 12ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿದೆ. ಹೊಸ ಶ್ರೇಣಿಯ ಮೂಲಕ 2020 ರವೇಳೆಗೆ 125 ಕೋಟಿ ಆದಾಯ ಗಳಿಕೆಯ ಗುರಿ ಹೊಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಮೇಕ್ ಇನ್ ಇಂಡಿಯಾ ವಿಶನ್‌ನ ನಿಟ್ಟಿನಲ್ಲಿ ಈ ಹೊಸ ಗಿಡಮೂಲಕೆಗಳ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದೆ. ತಮಿಳು ನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಎಲ್‌ಇಇಡಿ ಗೋಲ್ಡ್ ಪ್ರಮಾಣೀಕೃತ ಸುಸಜ್ಜಿತ ಘಟಕದಲ್ಲಿ ಉತ್ಪನ್ನ ತಯಾರಿಸಲಾಗುತ್ತಿದೆ. ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಒನ್ ಸರ್ಟ್ ಏಷ್ಯಾ ಆಗ್ರಿ ಸರ್ಟಿಫಿಕೇಟ್ ಪ್ರಮಾಣೀಕೃತ ಸಾವಯವ ತೊಟಗಳಲ್ಲಿ ಬೆಳೆಯುವಿಕೆ ,ಕೊಯ್ಲು ಮತ್ತು ಸಂಸ್ಕರಣಾ ಘಟಕಗಳಿಗೆ ಮೂಲಿಕೆ ಪಡೆಯಲಾಗುತ್ತಿದೆ .ಉತ್ಪನ್ನಗಳು ಎಲ್‌ಇಇಡಿ ಗೋಲ್ಡ್ ಪ್ರಮಾಣಿತವಾಗಿದೆ ,ಎಫ್‌ಎಸ್‌ಎಸ್‌ಎಐ ನ್ಯೂಟ್ರಾಸ್ಯುಟಿಕಲ್ ನಿಂಬಂಧನೆಗಳಿಗೆ ಬದ್ದವಾಗಿದೆ ಜಿಎಂಒ ಶ್ರೇಣಿಯೇತರ ಹರ್ಬಲ್ ಪೂರಕಗಳೆಂದು ಪ್ರಮಾಣೀಕೃತಗೊಂಡಿದೆ ಎಂದು ಗುರುಶರಣ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಎಸ್‌ಆರ್ ಮತ್ತು ಕಾರ್ಪೋರೇಟ್ ಕಮ್ಯೂನಿಕೇಶನ್ ವ್ಯವಸ್ಥಾಪಕರಾದ ಅನಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News