×
Ad

ಎ. 9ರಿಂದ ಇಮಾಂ ಶಾಫಿ ಅಕಾಡಮಿಯ ದಶಮಾನೋತ್ಸವ,

Update: 2018-03-27 20:53 IST

ಬಂಟ್ವಾಳ, ಮಾ. 27: ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಕಾಸರಗೋಡು ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿ ಇದರ ದಶ ಮಾನೋತ್ಸವ ಹಾಗೂ ಪ್ರಥಮ ಸನದು ಪ್ರದಾನ ಸಮ್ಮೇಳನವು ಎ.9 ರಿಂದ 15ರವರೆಗೆ ಅಕಾಡಮಿಯ ವಠಾರದಲ್ಲಿ ನಡೆಯಲಿದೆ ಎಂದು ದಾರಿಮೀಸ್ ರಾಜ್ಯ ಸಮಿತಿ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಮಸ್ತ" ಉಲಮಾ ಸಂಘಟನೆಯ ಮುಖಂಡರು, ಹಿರಿಯ ವಿದ್ವಾಂಸರಾದ ಆದ ಶೈಖುನಾ ಎಂ.ಎ.ಖಾಸಿಂ ಉಸ್ತಾದ್ ಸಾರಥ್ಯದಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮನ್ವಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಮಹಿಳೆಯರಿಗಾಗಿ ಸಂಸ್ಥೆಯ ಅಧೀನದಲ್ಲಿ ಅತ್ಯಾಧುನಿಕ ಪಠ್ಯಕ್ರಮದಡಿ ಶಿಕ್ಷಣ ನೀಡುವ ಮಹಿಳಾ ಕಾಲೇಜು ಕೂಡ ಯಶಸ್ವಿಯಾಗಿ ಕಾರ್ಯಚರಿಸುತ್ತಿದೆ ಎಂದು ಮಾಹಿತಿ ನೀಡಿದರು.

ಇದೀಗ ಸೀನಿಯರ್ ದಅವಾ ಕಾಲೇಜ್, ಜ್ಯೂನಿಯರ್ ದಅವಾ ಕಾಲೇಜ್, ವಾಫೀ ಕಾಲೇಜ್, ಹಿಫುಲುಲ್ ಕುರ್‌ಆನ್ ಕಾಲೇಜ್ ಹಾಗೂ ಮಹಿಳಾ ಕಾಲೇಜ್ ಮೂಲಕ ಬಹುಮುಖ ವಿದ್ಯಾಸಂಸ್ಥೆಗಳು ಕಾರ್ಯಾಚರಿಸುತ್ತಿದೆ ಎಂದ ಅವರು, ಈ ಸಮ್ಮೇಳನದಲ್ಲಿ ಸಮಸ್ತದ ಪ್ರಮುಖ ವಿದ್ಯಾಂಸರು, ದೇಶ ವಿದೇಶಗಳ ಗಣ್ಯರು, ಚಿಂತಕರು, ಕೇರಳ ಹಾಗೂ ಕರ್ನಾಟಕದ ಹಲವಾರು ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಮ್ಮೇಳನದ ಪ್ರಚಾರಾರ್ಥ ಎ. 1ರಿಂದ 5ರವರೆಗೆ ದ.ಕ.ಜಿಲ್ಲೆಯಾದ್ಯಂತ ವಾಹನಾ ಪ್ರಚಾರ ನಡೆಯಲಿದ್ದು, ಎ. 1ರಂದು ಪ್ರಮುಖ ಉಲಮಾ-ಉಮರಾ ನಾಯಕರ ಉಪಸ್ಥಿತಿಯಲ್ಲಿ ಮಂಗಳೂರಿನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗುರುಪುರ ರೆಂಜ್‌ನ ಜಂಇಯ್ಯತುಲ್ ಮುಅಲ್ಲಿಂ ಅಧ್ಯಕ್ಷ ಕೆ.ವಿ ಮಜೀದ್ ದಾರಿಮಿ ಕುಂಬ್ರ, ಕರ್ನಾಟಕ ರೌಳತುಲ್ ಉಲಮಾದ ಕಾರ್ಯ ದರ್ಶಿ ಕೆ.ಎಚ್ ಅಶ್ರಫ್ ಹನೀಫಿ ಉಪ್ಪಿನಂಗಡಿ, ದಾರಿಮೀಸ್‌ನ ಜಿಲ್ಲಾಧ್ಯಕ್ಷ ಕೆ.ಬಿ ಅಬ್ದುಲ್ ಕಾದರ್ ದಾರಿಮಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ರಸೀದ್ ಹಾಜಿ ಪರ್ಲಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News