×
Ad

ಬಂಟ್ವಾಳ ರೋಟರಿ ಕ್ಲಬ್: ಶಂಭೂರಿನಲ್ಲಿ 9 ಮನೆಗಳಿಗೆ ಸೌರ ವಿದ್ಯುತ್

Update: 2018-03-27 22:04 IST

ಬಂಟ್ವಾಳ, ಮಾ. 27: ಸ್ವಚ್ಚತಾ ಅಭಿಯಾನ, ವಿದ್ಯುತ್ ಸೌಲಭ್ಯವಿಲ್ಲದ ಮನೆಯನ್ನು ಗುರುತಿಸಿ ಸೌರ ವಿದ್ಯುತ್ ದೀಪ ಅಳವಡಿಸುವ ಕಾರ್ಯ ನಡೆದಿದೆ. ಬಂಟ್ವಾಳ ರೋಟರಿ ಕ್ಲಬ್‌ವತಿಯಿಂದ ಶಂಭೂರಿನಲ್ಲಿ 9 ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿ ಎಂದು ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚಂಗಪ್ಪ ಹೇಳಿದ್ದಾರೆ.

ಮಂಗಳವಾರ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ರೋಟರಿ ಜಿಲ್ಲೆಯಲ್ಲಿ 1 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿತ್ತು. ಆದರೆ ಪ್ರತಿಯೊಬ್ಬ ರೋಟರಿಯನ್ ಕೂಡ ಸಸಿ ನೆಡುವ ಮೂಲಕ ಸುಮಾರು ಎರಡು ಲಕ್ಷ ಸಸಿ ನೆಡಲಾಗಿದೆ. ಸ್ವಚ್ಛತಾ ಆಂದೋಲನ, ವೃಕ್ಷ ಸಂವರ್ಧನೆ, ಸೌರಬೆಳಕು ಈ ಮಹತ್ವದ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವಲ್ಲಿ ರೋಟರಿ ಜಿಲ್ಲೆ 3181 ಯಶಸ್ವಿಯಾಗಿದೆ ಎಂದರು.

ರೋಟರಿ ಸಂಸ್ಥೆಯ ಪೋಲಿಯೋ ಮುಕ್ತ ಅಭಿಯಾನ ವಿಶ್ವದಲ್ಲಿಯೇ ಯಶಸ್ವಿಯಾದ ಕಾರ್ಯಕ್ರಮವಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಸಂಪೂರ್ಣ ಗುರಿ ಸಾಧಿಸಲಿದ್ದೇವೆ ಎಂದ ಅವರು, ರೋಟರಿ 3181 ಜಿಲ್ಲೆಯಲ್ಲಿ 73 ಕ್ಲಬ್‌ಗಳನ್ನು ಹೊಂದಿವೆ. ಇವೆಲ್ಲವೂ ಉದ್ದೇಶಿತ ಗುರಿ ಸಾಧನೆಗಾಗಿ ಕೆಲಸ ನಿರ್ವಹಿಸುತ್ತಿವೆ ಎಂದರು.

ಮಯ್ಯರಬೈಲ್ ಬೋರುಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ, ಕ್ಲಬ್‌ನ ಸುಸಜ್ಜಿತ ಕಟ್ಟಡವನ್ನು ಗವರ್ನರ್ ಸುರೇಶ್ ಚಂಗಪ್ಪ ಅವರು ಉದ್ಘಾಟನೆ ನೆರವೇರಿಸಿದರು ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಈ ಸಂದರ್ಭ ತಿಳಿಸಿದರು.

ಶಂಭೂರು ಸರಕಾರಿಯ ಶಾಲೆಗೆ ಸಚಿವ ರೈ, ಜಿಪಂ ಸದಸ್ಯೆ ಕಮಾಲಾಕ್ಷಿ ಹಾಗೂ ರೋಟರಿ ಸಂಸ್ಥೆ ಸೇರಿದಂತೆ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ, ಮಣಿನಾಲ್ಕೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ರಂಗಮಂದಿರ ಹಾಗೂ ಬಡಕೊಟ್ಟು ಎಂಬಲ್ಲಿ ಅಂಗನವಾಡಿ ಕೇಂದ್ರವನ್ನು ಗವರ್ನರ್ ಸುರೇಶ್ ಚಂಗಪ್ಪ ಲೋಕಾರ್ಪಣೆಗೊಳಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಲಯ-4 ರ ಅಸಿಸ್ಟಂಟ್ ಗವರ್ನರ್ ಎ.ಎಂ.ಕುಮಾರ್, ಪ್ರಮುಖರಾದ ಕರುಣಾಕರ ರೈ, ನಾರಾಯಣ ಹೆಗ್ಡೆ, ಅಶ್ವನಿ ಕುಮಾರ್ ರೈ, ಬಂಟ್ವಾಳ ರೋಟರಿ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ, ಪ್ರಕಾಶ ಕಾರಂತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News