ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಗುರುರಾಜ್-ಚೈತ್ರಾ ತಂಡಕ್ಕೆ ಅಗ್ರಪ್ರಶಸ್ತಿ
ಕೋಟ, ಮಾ.27: ಸಚಿನ್ ಶೆಟ್ಟಿ ಮತ್ತು ಕಿಶೋರ್ ಶೆಟ್ಟಿ ಸ್ಮರಣಾರ್ಥ ಇಲ್ಲಿನ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿ.ಕೃ. ಗೋಕಾಕ್ ತಂಡದ ಗುರುರಾಜ್ ಮರವಂತೆ ಹಾಗೂ ಚೈತ್ರಾ ಅಗ್ರಪ್ರಶಸ್ತಿಯನ್ನು ಗೆದ್ದುಕೊಂಡರು. ವಿಜೇತರು ಪ್ರಥಮ ಬಹುಮಾನವಾಗಿ 20,000 ರೂ. ನಗದು ಮತ್ತು ಪಾರಿತೋಷಕವನ್ನು ಪಡೆದರು.
ದ್ವಿತೀಯ ಸ್ಥಾನವನ್ನು ದ.ರಾ.ಬೇಂದ್ರೆ ತಂಡದ ಗಣೇಶ್ ನಾಯಕ್ ಮತ್ತು ಶಾಲಿನಿ ಪಡೆದರು. ಅವರಿಗೆ 10,000 ರೂ. ನಗದು ಹಾಗೂ ಪಾರಿತೋಷಕ ವನ್ನು ನೀಡಲಾಯಿತು. ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ವಹಿಸಿದ್ದರು. ದ್ವಿತೀಯ ಸ್ಥಾನವನ್ನು ದ.ರಾ.ಬೇಂದ್ರೆ ತಂಡದ ಗಣೇಶ್ ನಾಯಕ್ ಮತ್ತು ಶಾಲಿನಿ ಪಡೆದರು. ಅವರಿಗೆ 10,000 ರೂ. ನಗದು ಹಾಗೂ ಪಾರಿತೋಷಕ ವನ್ನು ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ರಾಜ್ಯಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ರೋಟರಿ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ, ವಿಜಯ್ ಶೆಟ್ಟಿ, ರಾಘವೇಂದ್ರ ಪುತ್ರನ್, ಪ್ರವೀಣ್ ಶೆಟ್ಟಿ, ಜೇಮ್ಸ್ ಡಿಸಿಲ್ವಾ, ಬಸವರಾಜ್ ಮಾದರ, ಶಮಿತಾ ಶೆಟ್ಟಿ, ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಿಲಿಟರಿ, ಪೊಲೀಸ್ ಹಾಗೂ ಡಿ-ದರ್ಜೆ ನೌಕರರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಕಾರ್ಯಕ್ರಮವನ್ನು ರಾಘವೇಂದ್ರ ಶೆಟ್ಟಿ ನಡೆಸಿಕೊಟ್ಟರು. ರಾಘವೇಂದ್ರ ಶೆಟ್ಟಿ ಕಟ್ಕೇರಿ ಸ್ವಾಗತಿಸಿದರೆ, ನರೇಂದ್ರಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.