×
Ad

ಉಡುಪಿ: ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

Update: 2018-03-28 20:03 IST

ಉಡುಪಿ, ಮಾ.28: ಬಲಿಷ್ಠ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಉಡುಪಿಯ ಮಾಸ್ ಇಂಡಿಯಾ ಹಾಗೂ ಮಾಹಿತಿ ಸೇವಾ ಸಮಿತಿಯ ನೇತೃತ್ವ ದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸರಕಾರ ಭ್ರಷ್ಟಾಚಾರ ಮುಕ್ತ ರಾಷ್ಟ್ರ ಮಾಡುವ ನಿಟ್ಟಿನಲ್ಲಿ ಕೂಡಲೇ ಲೋಕ್‌ಪಾಲ್ ಮಸೂದೆ ಜಾರಿಗೆ ತರಬೇಕು. ರೈತ ಬೆಳೆದ ಬೆಳೆಗೆ ಕನಿಷ್ಠ ದರ ನೀಡಬೇಕು. ಪ್ರತಿಯೊಬ್ಬ ರೈತನಿಗೂ ಪಿಂಚಣಿ ಕೊಡಬೇಕು. ರೈತರ ಆತ್ಮಹತ್ಯೆ ಯನ್ನು ತಡೆಗಟ್ಟಬೇಕು. ಮಧ್ಯವರ್ತಿಗಳ ಮೋಸವನ್ನು ನಿಲ್ಲಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ರೈತರ ಬೆಳೆ ವಿಮಾ ಯೋಜನೆಯನ್ನು ನೀಡಬೇಕು ಎಂದು ಕರ್ನಾಟಕ ಮಾಸ್ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟಿಯಾರ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಸ್ ಇಂಡಿಯಾ ಕಾರ್ಯದರ್ಶಿ ಎಂ.ಮಹೇಶ್, ಮಣಿಪಾಲ ಅಧ್ಯಕ್ಷ ನರಸಿಂಹಮೂರ್ತಿ, ಶ್ರೀಧರ್ ಭಟ್ ಐರಿನ್ ತಾವ್ರೊ, ವೀಣಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News