ಕುಂದಾಪುರ: ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಸಮಯ ನಿಗದಿ
ಕುಂದಾಪುರ, ಮಾ.28: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕುಂದಾಪು ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗುವ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಅರಿವು ಮೂಡಿಸುವ ಪ್ರಾತ್ಯಕ್ಷಿತೆಯನ್ನು ಎ.2ರಿಂದ ವಿವಿದೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ವಾರ್ಡ್‌ಗಳ ಮತದಾರರಿಗೆ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಎ. 2ರಂದು ಬೆಳಗ್ಗೆ 11 ಗಂಟೆಗೆ ಸರಕಾರಿ ಪ್ರಾಥಮಿಕ ಶಾಲೆ ವಡೇರ ಹೋಬಳಿ ಹೂಂಚಾರುಬೆಟ್ಟುನಲ್ಲಿ 21-ಹೂಂಚಾರ್‌ಬೆಟ್ಟು ವಾರ್ಡ್ ಮತದಾರ ರಿಗೆ, ಸಂಜೆ 4ಕ್ಕೆ ಸಮುದಾಯ ಭವನ ಗಾಂಧಿ ಪಾರ್ಕ್ ಕುಂದಾಪುರ ಇಲ್ಲಿ 17-ಟಿ.ಟಿ ರಸ್ತೆ, 18-ನಾನಾಸಾಹೇಬ್ ರಸ್ತೆ, 22-ಶಾಂತಿನಿಕೇತನ, 23- ಮಂಗಲ್‌ಪಾಂಡ್ಯ ರಸ್ತೆ ವಾರ್ಡ್‌ಗಳ ಮತದಾರರಿಗೆ, ಎ.3ರ ಬೆಳಿಗ್ಗೆ 11ಕ್ಕೆ ಅಂಬೇಡ್ಕರ್ ಭವನ, ಕಾಲೇಜು ರಸ್ತೆ ಕುಂದಾಪುರ ಇಲ್ಲಿ 19-ವಿಠಲವಾಡಿ, 20-ಬರೆಕಟ್ಟು ರಸ್ತೆ ವಾರ್ಡ್ ಮತದಾರರಿಗೆ, ಸಂಜೆ 4ಕ್ಕೆ ಪುರಸಭಾ ಕಚೇರಿ ಸಭಾಂಗಣ ಕುಂದಾಪುರ ಇಲ್ಲಿ 10-ಚರ್ಚ್ ರಸ್ತೆ, 11-ಸೆಂಟ್ರಲ್ ವಾರ್ಡ್, 7-ಮೀನುಮಾರ್ಕೆಟ್ ವಾರ್ಡ್, 9-ಸರಕಾರಿ ಆಸ್ಪತ್ರೆ ವಾರ್ಡ್ ಮತದಾರರಿಗೆ.
ಎ.4ರಂದು ಬೆಳಗ್ಗೆ 11ಕ್ಕೆ ಸರಕಾರಿ ಪ್ರಾಥಮಿಕ ಶಾಲೆ ಚಿಕ್ಕನ್‌ಸಾಲ್ ರಸ್ತೆ ಕುಂದಾಪುರ ಇಲ್ಲಿ 6-ಚಿಕ್ಕನ್‌ಸಾಲ್ ರಸ್ತೆ ಎಡಬದಿ, 8-ಚಿಕ್ಕನ್‌ಸಾಲ್ ಬಲಬದಿ ಮತದಾರರಿಗೆ, ಸಂಜೆ 4ರಿಂದ ಸರಕಾರಿ ಪ್ರಾಥಮಿಕ ಶಾಲೆ ಖಾರ್ವಿಕೇರಿ ಕುಂದಾಪುರ ಇಲ್ಲಿ 3-ಈಸ್ಟ್ ಬ್ಲಾಕ್, 4-ಖಾರ್ವಿಕೇರಿ, 5-ಬಹದ್ದೂರ್ ಷಾ ರಸ್ತೆ ವಾರ್ಡ್ ಮತದಾರರಿಗೆ, ಎ.5ರಂದು ಬೆಳಗ್ಗೆ 11ಕ್ಕೆ ಸರಕಾರಿ ಪ್ರಾಥಮಿಕ ಶಾಲೆ ಮುದ್ದುಗುಡ್ಡೆ ಕುಂದಾಪುರ ಇಲ್ಲಿ 1-ಫೆರ್ರಿ ರಸ್ತೆ, 2-ಮುದ್ದುಗುಡ್ಡೆ, 12-ವೆಸ್ಟ್ ಬ್ಲಾಕ್ ವಾರ್ಡ್, 13-ಮಂಗಳೂರು ಟೈಲ್ಸ್ ಫ್ಯಾಕ್ಟರಿ ವಾರ್ಡ್ ಮತದಾರರಿಗೆ, ಸಂಜೆ 4 ಗಂಟೆಗೆ ಉರ್ದು ಶಾಲೆ ಕೋಡಿ ಇಲ್ಲಿ 14-ಕೋಡಿ ದಕ್ಷಿಣ, 15-ಕೋಡಿ ಮಧ್ಯ, 16-ಕೋಡಿ ಉತ್ತರ ವಾರ್ಡ್‌ಗಳಿಗೆ ಕಾರ್ಯಗಾರ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅಲ್ಲದೇ ಚುನಾವಣೆಗೆ ಸಂಬಂಧಿಸಿದ ದೂರು ಸ್ವೀಕರಿಸಲು 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮನ್ನು ಪುರಸಭೆಯಲ್ಲಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಇಲ್ಲಿನ ದೂರವಾಣಿ ಸಂಖ್ಯೆ: 08254-235160 ಯನ್ನು ಸಂಪರ್ಕಿಸಿ ದಾಖಲಿಸಬಹುದಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.