ಉಡುಪಿ: ಖಾಸಗಿ ಸಭೆ, ಸಮಾರಂಭ, ಮೆರವಣಿಗೆಗೆ ಅನುಮತಿ ಕಡ್ಡಾಯ
Update: 2018-03-28 20:13 IST
ಉಡುಪಿ, ಮಾ.28: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾ.27ರಿಂದ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿ ಯಲ್ಲಿ ಖಾಸಗಿ ಸಭೆ ಸಮಾರಂಭ, ಮೆರವಣಿಗೆ ನಡೆಸುವ ಮುಂಚಿತವಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರ-119 ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆ ಇವರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಒಂದು ವೇಳೆ ಈಗಾಗಲೇ ಪಟ್ಟಣ ಪಂಚಾಯತ್ ವತಿಯಿಂದ ಅನುಮತಿ ಪಡೆದಿದ್ದರೂ ಮತ್ತೊಮ್ಮೆ ಹೊಸದಾಗಿ ಸಂಬಂಧಿಸಿದವರಿಂದ ಅನುಮತಿ ಪಡೆಯ ಬೇಕು ಎಂದು ಸಾಲಿಗ್ರಾಮ ಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.