×
Ad

ವಾಸ್ತವಾಂಶ ತಿರುಚುವ ಮಾಧ್ಯಮಗಳು: ರಾಹುಲ್ ಟೀಕೆ

Update: 2018-03-28 20:57 IST

ಹೊಸದಿಲ್ಲಿ, ಮಾ.28: ವಾಸ್ತವಾಂಶವನ್ನು ತಿರುಚುವ ಮೂಲಕ ಮಾಧ್ಯಮಗಳು ತನ್ನ ವಿರುದ್ಧದ ದ್ವೇಷ ಪ್ರಸಾರಕ್ಕೆ ಪ್ರೋತ್ಸಾಹ ನೀಡುತ್ತಿವೆ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತನ್ನ ಬಗ್ಗೆ ಸುಳ್ಳು ಸುದ್ದಿ ಹರಡುವ ಮೂಲಕ ಮಾಧ್ಯಮಗಳು ತಮ್ಮ ಜೀವನೋಪಾಯದ ಮಾರ್ಗ ಕಂಡುಕೊಂಡಿರುವುದು ತನಗೆ ಸಂದಿರುವ ಗೌರವವಾಗಿದೆ ಎಂದು ಹೇಳಿದ್ದಾರೆ.

ಹಣ ಪಡೆದು ಕೋಮುವಾದಿ ಸುದ್ದಿಗಳನ್ನು ಪ್ರಸಾರ ಮಾಡಲು ತಾವು ಸಿದ್ಧ ಎಂದು 17 ಮಾಧ್ಯಮ ಸಂಸ್ಥೆಗಳು ಹೇಳಿರುವುದು ‘ಕೋಬ್ರಾಪೋಸ್ಟ್’ ಎಂಬ ವೆಬ್‌ಪೋರ್ಟಲ್ ಇತ್ತೀಚೆಗೆ ನಡೆಸಿರುವ ಕುಟುಕು ಕಾರ್ಯಾಚರಣೆಯಿಂದ ತಿಳಿದು ಬಂದಿರುವುದನ್ನು ರಾಹುಲ್ ಉಲ್ಲೇಖಿಸಿದರು. ಸುಳ್ಳು ಸುದ್ದಿ ಪ್ರಸಾರ ಹಾಗೂ ವಾಸ್ತವ ವರದಿಯನ್ನು ತಿರುಚಿ ಪ್ರಸಾರ ಮಾಡುವ ಮೂಲಕ ತನ್ನ ವಿರುದ್ಧ ದ್ವೇಷ ಪ್ರಸಾರಕ್ಕೆ ಪ್ರೋತ್ಸಾಹ ನೀಡುತ್ತಿರುವವರನ್ನು ತಾನು ದ್ವೇಷಿಸುವುದಿಲ್ಲ. ಅವರಿಗೆ ಅದೊಂದು ವ್ಯಾಪಾರವಾಗಿದೆ. ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯಲ್ಲಿ ತಿಳಿದು ಬಂದಿರುವಂತೆ, ಇಲ್ಲಿ ದ್ವೇಷಪ್ರಸಾರಕ್ಕೆ ಹಣ ಪಡೆಯಲಾಗುತ್ತದೆ .ಕೋಬ್ರಾಪೋಸ್ಟ್ ವರದಿಯ ಕುರಿತು ಮುಖ್ಯವಾಹಿನಿಯ ಮಾಧ್ಯಮಗಳು ವಹಿಸಿರುವ ಮೌನಧೋರಣೆ ಈ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ತೋರಿಸಿಕೊಟ್ಟಿದೆ ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News