ಏರ್ ಇಂಡಿಯಾ: 76% ಪಾಲು ಮಾರಾಟಕ್ಕೆ ಸರಕಾರ ನಿರ್ಧಾರ
Update: 2018-03-28 20:59 IST
ಹೊಸದಿಲ್ಲಿ, ಮಾ.28: ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ಇಂಡಿಯಾದಿಂದ ಬಂಡವಾಳ ವಾಪಸು ಪಡೆಯುವ ಸಲಹೆಗೆ ಸರಕಾರ ಬುಧವಾರ ಅನುಮೋದನೆ ನೀಡಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.
ಏರ್‌ಇಂಡಿಯಾದಲ್ಲಿ ಸರಕಾರ ಹೊಂದಿರುವ ಶೇ.76ರಷ್ಟು ಪಾಲನ್ನು ಮಾರಾಟ ಮಾಡುವ ಶಿಫಾರಸ್ಸಿಗೆ ತತ್ವಶಃ ಒಪ್ಪಿಗೆ ನೀಡಲಾಗಿದೆ. ಅದರಂತೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್(ಎಐಎಕ್ಸ್‌ಎಲ್)ನಲ್ಲಿ ಸರಕಾರ ಹೊಂದಿರುವ ಶೇ.100ರಷ್ಟು ಪಾಲನ್ನು, ಏರ್ ಇಂಡಿಯಾ ಲಿಮಿಟೆಡ್‌ನಲ್ಲಿ ಹೊಂದಿರುವ ಶೇ.76ರಷ್ಟು ಪಾಲನ್ನು ಹಾಗೂ ಏರ್ ಇಂಡಿಯಾ ಎಸ್‌ಎಟಿಎಸ್ ಏರ್‌ಪೋರ್ಟ್ ಸರ್ವಿಸ್‌ನಲ್ಲಿ ಹೊಂದಿರುವ ಶೇ.50ರಷ್ಟು ಪಾಲನ್ನು ಸರಕಾರ ಮಾರಾಟ ಮಾಡಲಿದೆ. ಇವನ್ನು ಖರೀದಿಸಲು ಆಸಕ್ತಿ ಇರುವವರು ಮೇ 14ರ ಸಂಜೆ 5 ಗಂಟೆಯೊಳಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.