×
Ad

ಮಂಗಳೂರು: ಜಮೀಯ್ಯತುಲ್ ಫಲಾಹ್ ವತಿಯಿಂದ ಕಿಡ್ನಿ ರೋಗಿಗಳಿಗೆ ಆರ್ಥಿಕ ನೆರವು ಕಾರ್ಯಕ್ರಮ

Update: 2018-03-28 21:32 IST

ಮಂಗಳೂರು, ಮಾ. 28: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ಹಾಗೂ ಕರ್ನಿರೆ ಚಾರಿಟೇಬಲ್ ಟ್ರಸ್ಟ್  ಸಹಯೋಗದಲ್ಲಿ ಕಿಡ್ನಿ ಸಂಬಂಧಿತ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ‘ಉಚಿತ ಡಯಾಲಿಸಿಸ್ ಫಂಡ್’ನಿಂದ 22 ಅರ್ಹ ರೋಗಿಗಳಿಗೆ 8.5 ಲಕ್ಷ ರೂ. ವಿತರಿಸಲಾಯಿತು.

ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್‌ನ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಸಾದುದ್ದೀನ್ ಸ್ವಾಲಿಹ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಿರೆ ಚಾರಿಟೇಬಲ್ ಟ್ರಸ್ಟ್‌ನ ಸೈಯದ್ ಹಾಜಿ ಕರ್ನಿರೆ, ಶೇಖಬ್ಬ ಕರ್ನಿರೆ ಅವರು ಸಹಾಯಧನ ವಿತರಿಸಿದರು.

ಕಂಕನಾಡಿ ಮಸೀದಿಯ ಖತೀಬ್ ಇಸ್ಮಾಯೀಲ್ ಮದನಿ, ಹಂಝ ಮಿತ್ತೂರು, ಪಿಬಿಎ ರಝಾಕ್, ಇಸ್ಮಾಯೀಲ್ ಬಿಕರ್ನಕಟ್ಟೆ, ಜಮೀಯ್ಯತುಲ್ ಫಲಾಹ್ ಮಂಗಳೂರು ಘಟಕದ ಅಬ್ದುಲ್ ವಹ್ಹಾಬ್ ಮತ್ತು ಸಂಸ್ಥೆಯ ಕಾರ್ಯದರ್ಶಿ ಜಮಾಲ್ ಕುದ್ರೋಳಿ ಉಪಸ್ಥಿತರಿದ್ದರು. 

ಖಜಾಂಚಿ ಇಮ್ತಿಯಾಝ್ ಖತೀಬ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News