ಹೊಳೆಗೆ ಹಾರಿ ಆತ್ಮಹತ್ಯೆ
Update: 2018-03-28 21:50 IST
ಕುಂದಾಪುರ, ಮಾ.28: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡ ಬಳ್ಕೂರು ನಿವಾಸಿ ಸೂರ ಕುಂದರ್(73) ಎಂಬವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಇವರು ಮಾ.27ರಂದು ಬೆಳಗಿನ ಜಾವ ಮನೆ ಸಮೀಪದ ಹೊಳೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹವು ಮಾ.28ರಂದು ಬೆಳಗ್ಗೆ ಕುಂದಾಪುರ ಖಾರ್ವಿಕೇರಿ ಎಂಬಲ್ಲಿರುವ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.