ಮಾ.30ರಿಂದ ಎಂಆರ್‌ಪಿಎಲ್‌ನಿಂದ ಉಚಿತ ಕೃತಕ ಕಾಲು ಜೋಡಣಾ ಶಿಬಿರ
Update: 2018-03-28 22:32 IST
ಮಂಗಳೂರು, ಮಾ.28: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮ(ಸಿಎಸ್‌ಆರ್)ದಡಿ ಮಾ.30, 31 ಮತ್ತು ಎಪ್ರಿಲ್ 1ರಂದು ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದೆ.
ಬಾಳದಲ್ಲಿರುವ ಎಂಆರ್‌ಪಿಎಲ್ ಎಂಪ್ಲಾಯೀಸ್ ಕ್ಲಬ್‌ನಲ್ಲಿನ ನಡೆಯುವ 3 ದಿನಗಳ ಶಿಬಿರದ ಪ್ರಯೋಜನ ಪಡೆಯಲಿಚ್ಛಿಸುವ ಅರ್ಹ ವಿಕಲಚೇತನರು ಈ ದಿನಗಳಲ್ಲಿ ಹಾಜರರಿರಬೇಕು. ಪೋಲಿಯೋ ಪೀಡಿತರಾಗಿ ನಡೆದಾಡಲು ಅಶಕ್ತರಾದ ಫಲಾನುಭವಿಗಳೂ ಇದರಲ್ಲಿ ಪಾಲ್ಗೊಂಡು ಫಲಾನುಭವಿಗಳಾಗಬಹುದು.
ಶಿಬಿರವು ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಫಲಾನುಭವಿಗಳ ಮಾಪನವನ್ನು ತೆಗೆದುಕೊಳ್ಳಲಾಗುವುದು ಮತ್ತು ಎರಡನೆಯ ಹಂತದಲ್ಲಿ ಕೃತಕ ಕಾಲುಗಳನ್ನು ಜೋಡಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.