ಝುಕರ್‌ಬರ್ಗ್‌ರಿಂದ ಕಾಂಗ್ರೆಸ್ ಮುಂದೆ ಸಾಕ್ಷ್ಯ?

Update: 2018-03-28 17:07 GMT

ನ್ಯೂಯಾರ್ಕ್, ಮಾ. 28: ತನ್ನ ಕಂಪೆನಿಯು ಬಳಕೆದಾರರ ಮಾಹಿತಿಗಳನ್ನು ಹೇಗೆ ಸಂಗ್ರಹಿಸುತ್ತದೆ ಹಾಗೂ ಬಳಸುತ್ತದೆ ಎಂಬ ಬಗ್ಗೆ ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಸಮ್ಮುಖದಲ್ಲಿ ಸಾಕ್ಷ್ಯ ನುಡಿಯುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ವಾರಗಳ ಅವಧಿಯಲ್ಲಿ ತಾನು ಸಾಕ್ಷ ನುಡಿಯಬೇಕಾಗುತ್ತದೆ ಎಂಬ ವಾಸ್ತವವನ್ನು ಝುಕರ್‌ಬರ್ಗ್ ಅರ್ಥಮಾಡಿಕೊಂಡಿದ್ದಾರೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಕಾಂಗ್ರೆಸ್ ಮುಂದೆ ಹಾಜರಾಗುವಂತೆ ಕೋರುವ ಆಹ್ವಾನ ಫೇಸ್‌ಬುಕ್‌ಗೆ ಬಂದಿದೆ ಹಾಗೂ ಕಂಪೆನಿಯು ಸಂಸದರೊಂದಿಗೆ ಮಾತುಕತೆ ನಡೆಸುತ್ತಿದೆ. ಆದರೆ, ಝುಕರ್‌ಬರ್ಗ್ ಹಾಜರಾಗುವ ಸಾಧ್ಯತೆಯನ್ನು ನಾವು ಖಚಿತಪಡಿಸುವುದಿಲ್ಲ ಎಂದು ಫೇಸ್‌ಬುಕ್ ಪ್ರತಿನಿಧಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News