×
Ad

10ನೆ ತರಗತಿಯ ಗಣಿತ, ಪಿಯುಸಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳ ಸೋರಿಕೆ ?

Update: 2018-03-28 22:42 IST

ಮಂಗಳೂರು, ಮಾ.28: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಸಿ) 10ನೆ ತರಗತಿಯ ಗಣಿತ ಮತ್ತು ಪಿಯುಸಿಯ ಅರ್ಥ ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸುವ ಬಗ್ಗೆ ಸೂಚನೆ ನೀಡಿದೆ. ಇದರಿಂದ ಪರೀಕ್ಷೆ ಬರೆದು ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿರುವುದಾಗಿ ಸಿಬಿಎಸ್ ವಿದ್ಯಾರ್ಥಿಗಳು ಹಾಗೂ ಪೋಷಕರು ಪತ್ರಿಕೆಗೆ ತಿಳಿಸಿದ್ದಾರೆ.

ಈ ಬಾರಿಯ 10ನೆ ತರಗತಿಯ ಗಣಿತ ಪರೀಕ್ಷೆ ಸುಲಭವಾಗಿತ್ತು. ಉತ್ತಮ ಅಂಕ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿ ಗಳಿಗೆ ನಿರಸೆಯಾಗಿದೆ. ಇದೀಗ ಸಿಬಿಎಸ್‌ಸಿ ಮಂಡಳಿ ಮರು ಪರೀಕ್ಷೆಯನ್ನು ನಡೆಸುವ ಬಗ್ಗೆ ನಿರ್ಧರಿಸಿದ್ದು, ಒಂದು ವಾರದೊಳಗೆ ಮರು ಪರೀಕ್ಷೆಯ ವಿವರ ನೀಡುವುದಾಗಿ ತಿಳಿಸಿದೆ.

ಪರೀಕ್ಷೆಗೆ ಸಂಬಂಧಿಸಿದಂತೆ ದೂರು ಬಂದಿರುವ ಹಿನ್ನೆಲೆಯಲ್ಲಿ ಸಿಬಿಎಸ್‌ಸಿ ಮಂಡಳಿಯ ಪಾವಿತ್ರತೆ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬುಧವಾರ ಸಿಬಿಎಸ್‌ಸಿ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

10ನೆ ತರಗತಿಯ ಗಣಿತ ಮತ್ತು ಪಿಯುಸಿಯ ಅರ್ಥಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗುವ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷೆಗೆ ಮುಂಚಿತವಾಗಿ ಕಂಡು ಬಂದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಿಬಿಎಸ್‌ಸಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಮಂಡಳಿಯ ನಿರ್ಧಾರದ ಬಗ್ಗೆ ಶಾಲೆಗಳಿಗೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಯಾವೂದೇ ಅಧಿಕೃತ ಸೂಚನೆಗಳು ಬಂದಿಲ್ಲಾ ಎಂದು ಸಿಬಿಎಸ್‌ಸಿ ಶಾಲೆಗಳ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ. ಮರು ಪರೀಕ್ಷೆಯಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಿದೆ ರಜೆಯ ಖುಷಿಗೂ ತಡೆಯಾಗಿದೆ ಎಂದು ಆಡಳಿತ ಮಂಡಳಿಯ ಸದಸ್ಯರೊಬ್ಬರು ಪತ್ರಿಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News