×
Ad

ಲಕ್ಷಾಂತರ ರೂ. ವಂಚನೆ: ದೂರು

Update: 2018-03-29 21:20 IST

ಮಂಗಳೂರು, ಮಾ. 29: ಮಲ್ಪೆಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.

ಮಲ್ಪೆಯ ನಿವಾಸಿ ಎಚ್. ಮುಹಮ್ಮದ್ ನಾಸಿರ್ ವಂಚನೆಗೊಳಗಾದವರು.

ಬೆಂಗಳೂರಿನಲ್ಲಿ ವಾಸವಾಗಿದ್ದ ಹಾಗೂ ಮೂಲತಃ ಮೈಸೂರಿನ ನಿವಾಸಿ ಅರವಿಂದ್ ಕಶ್ಯಪ್ ಮತ್ತು ಬೆಂಗಳೂರು ರಾಜಾಜಿನಗರದ ನಿವಾಸಿ ಚಂದ್ರಶೇಖರ್ ಎಂಬವರು ಮೋಸ ಮಾಡಿದವರು ಎಂದು ಆರೋಪಿಸಲಾಗಿದೆ.

ಎಚ್. ಮುಹಮ್ಮದ್ ನಾಸಿರ್ ಅವರು ಚಂದ್ರಶೇಖರ್ ಅವರಿಗೆ 13,73,000 ರೂ. ಸಾಲವಾಗಿ ನೀಡಿದ್ದು, ಆ ಪೈಕಿ 1,65,000 ಬೆಲೆಯ ವುಡ್ ಮೆಟೀರಿಯಲ್ಸ್‌ಗಳನ್ನು ನೀಡಿದ್ದು, ಬಾಕಿ ಹಣ ಸಂದಾಯ ಮಾಡದೆ ವಂಚಿಸಿದ್ದಾರೆ ಎಂದು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಅಲ್ಲದೆ, ಫ್ಯಾಟ್‌ವೊಂದರ ಮಾರಾಟ ಮತ್ತು ಬ್ಯಾಂಕ್ ಸಾಲ ತೆಗೆಸಿಕೊಡುವ ವಿಚಾರಕ್ಕೆ ಸಂಬಂಧಿಸಿ ಆರೋಪಿ ಅರವಿಂದ ಕಶ್ಯಪ್ ಎಂಬವರಿಗೆ 4,92,000 ನೀಡಿದ್ದು, ಆದರೆ, ಕಶ್ಯಪ್ ಫ್ಲಾಟ್ ಮಾರಾಟ ಮಾಡದೆ ಮತ್ತು ಬ್ಯಾಂಕ್‌ನಿಂದ ಸಾಲವನ್ನೂ ತೆಗೆಸಿಕೊಡದೆ ತನಗೆ ವಂಚಿಸಿದ್ದಾರೆ ಎಂದು ರಾಜರಾಜೇಶ್ವರಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News