ಇಂಡಿಗೋ ವಿಮಾನದ ಚಕ್ರಕ್ಕೆ ಬೆಂಕಿ

Update: 2018-03-29 16:52 GMT

ಹೈದರಾಬಾದ್, ಮಾ. 29: ಇಂಡಿಗೋ ಸಂಸ್ಥೆಯ ವಿಮಾನ ಬುಧವಾರ ರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗೆ ಟಯರ್ ಸ್ಫೋಟಗೊಂಡಿದೆ.

ಈ ವಿಮಾನದಲ್ಲಿ 77 ಮಂದಿ ಪ್ರಯಾಣಿಕರಿದ್ದರು. ಟಯರ್ ಸ್ಫೋಟಗೊಂಡ ಕೂಡಲೆ ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಈ ವಿಮಾನ ತಿರುಪತಿಯಿಂದ ಹೈದರಾಬಾದ್‌ಗೆ ತೆರಳುತ್ತಿತ್ತು. ‘‘ಎಟಿಆರ್‌ನಿಂದ ನಿರ್ವಹಣೆಯಾಗುತ್ತಿದ್ದ ತಿರುಪತಿಯಿಂದ ಹೈದರಾಬಾದ್‌ಗೆ ಸಂಚರಿಸುತ್ತಿದ್ದ 6ಇ 7117 ವಿಮಾನ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಟಯರ್ ಸ್ಪೋಟಗೊಂಡಿತು. 72 ಪ್ರಯಾಣಿಕರು, 1 ಮಗು ಹಾಗೂ ನಾಲ್ವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’’ ಎಂದು ಇಂಡಿಗೊ ಹೇಳಿಕೆ ತಿಳಿಸಿದೆ.

ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಟಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ವಿಮಾನ ನಿಲ್ದಾಣದ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News