ಕೋಟ: ಸಮುದ್ರಕ್ಕೆ ಬಿದ್ದು ಮೃತ್ಯು
Update: 2018-03-29 22:48 IST
ಕೋಟ, ಮಾ.29: ಪಾರಂಪಳ್ಳಿ ಗ್ರಾಮದ ಅರಬ್ಬಿ ಸಮುದ್ರದ ದಡದಲ್ಲಿ ಮಾ.28ರಂದು ಬೆಳಗ್ಗೆ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೋಟತಟ್ಟು ಗ್ರಾಮದ ಕರಿಯ ಮರಕಾಲ (60) ಎಂದು ಗುರು ತಿಸಲಾಗಿದೆ. ಇವರು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಕಡಲ ತೆರೆಗೆ ಆಯ ತಪ್ಪಿನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದು, ಇವರ ಮೃತದೇಹ ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.