ಮಂಗಳೂರು: ಚುನಾವಣೆ ಹಿನ್ನೆಲೆ- ತೀವ್ರಗೊಂಡ ವಾಹನ ತಪಾಸಣೆ
Update: 2018-03-29 23:13 IST
ಮಂಗಳೂರು, ಮಾ. 29: ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರಮುಖ ಚೆಕ್‌ಪೋಸ್ಟ್‌ಗಳ ಸಹಿತ ವಿವಿಧೆಡೆ ಅಧಿಕಾರಿಗಳಿಂದ ವಾಹನಗಳ ತಪಾಸಣೆ ಗುರುವಾರವೂ ಮುಂದುವರಿದಿದೆ.
ಜಿಲ್ಲೆಯ ಅಲ್ಲಲ್ಲಿ ಅಳವಡಿಸಲಾಗಿದ್ದ ಬಹುತೇಕ ಫ್ಲೆಕ್ಸ್, ಕಟೌಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ತಲಪಾಡಿ ಗಡಿ ಭಾಗ, ಪುತ್ತೂರು, ಕಬಕ, ಸಂಪಾಜೆ, ಬೆಳ್ತಂಗಡಿ, ಚಾರ್ಮಾಡಿ, ಮುಲ್ಕಿ ಮತ್ತು ಸುಳ್ಯ ಮೊದಲಾದ ಕಡೆಗಳಲ್ಲಿ ಅಧಿಕಾರಿಗಳು ವಾಹನಗಳನ್ನು ತಪಾಸಣೆ ಗೊಳಪಡಿಸುತ್ತಿದ್ದಾರೆ. ಬುಧವಾರದಿಂದ ಈ ಕಾರ್ಯಾಚರಣೆ ಆರಂಭಗೊಂಡಿದ್ದರೂ ಗುರುವಾರ ಕಾರ್ಯಾಚರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.