ಬ್ರಹ್ಮಪುತ್ರ ನೀರಿನ ಕುರಿತ ಮಾಹಿತಿ ಭಾರತಕ್ಕೆ ನೀಡಲು ಚೀನಾ ಅಸ್ತು

Update: 2018-03-29 18:06 GMT

ಬೀಜಿಂಗ್, ಮಾ. 29: ಬ್ರಹ್ಮಪುತ್ರ ನದಿ ನೀರಿನ ಕುರಿತ ಅಂಕಿಅಂಶಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ತಾನು ಒಪ್ಪಿರುವುದಾಗಿ ಚೀನಾ ಬುಧವಾರ ಹೇಳಿದೆ.

  ಕಳೆದ ವರ್ಷದ ಡೋ ಕಾಲಾದಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ನಡೆದ ಮುಖಾಮುಖಿ ಬಳಿಕ ಮಾಹಿತಿ ಹಂಚಿಕೆಯನ್ನು ಚೀನಾ ನಿಲ್ಲಿಸಿತ್ತು.

ಗಡಿಯಾಚೆ ಹರಿಯುವ ನದಿಗಳಿಗೆ ಸಂಬಂಧಿಸಿ ಭಾರತ ಮತ್ತು ಚೀನಾಗಳು ಚೀನಾದ ಹಂಗ್‌ಝೌ ನಗರದಲ್ಲಿ ಮಾತುಕತೆ ನಡೆಸಿದ ಒಂದು ದಿನದ ಬಳಿಕ ಚೀನಾ ವಿದೇಶ ಸಚಿವಾಲಯ ಈ ಘೋಷಣೆ ಹೊರಡಿಸಿದೆ.

ಬ್ರಹ್ಮಪುತ್ರ ಚೀನಾದ ಟಿಬೆಟ್‌ನಲ್ಲಿ ಹುಟ್ಟುತ್ತದೆ ಹಾಗೂ ಅರುಣಾಚಲಪ್ರದೇಶ ಮತ್ತು ಅಸ್ಸಾಂಗೆ ಹರಿಯುತ್ತದೆ. ಈಶಾನ್ಯದ ರಾಜ್ಯಗಳಲ್ಲಿ ಪ್ರವಾಹಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಈ ನದಿಯ ನೀರು ಹರಿವಿಕೆಗೆ ಸಂಬಂಧಿಸಿದ ಮಾಹಿತಿ ಭಾರತಕ್ಕೆ ಅಗತ್ಯವಾಗಿದೆ.

ಒಪ್ಪಂದವೊಂದರ ಪ್ರಕಾರ, ಚೀನಾವು ಭಾರತದೊಂದಿಗೆ ನದಿ ನೀರು ಹರಿವು ಅಂಕಿಅಂಶಗಳನ್ನು ಹಂಚಿಕೊಳ್ಳಬೇಕಾಗಿದೆ. ಆದರೆ, ಕಳೆದ ವರ್ಷ ಡೋ ಕಾಲಾದಲ್ಲಿ ಚೀನಾ ಮತ್ತು ಭಾರತದ ಸೈನಿಕರು ಮುಖಾಮುಖಿಯಾಗಿ 73 ದಿನಗಳ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೆಯನ್ನು ಚೀನಾ ತಡೆಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News