ಘೌಟದಿಂದ 5,300 ಬಂಡುಕೋರರು ಇದ್ಲಿಬ್‌ಗೆ: ರಶ್ಯ

Update: 2018-03-29 18:09 GMT

ಮಾಸ್ಕೊ, ಮಾ. 29: ಸುಮಾರು 5,300 ಬಂಡುಕೋರರು ಮತ್ತು ಅವರ ಕುಟುಂಬ ಸದಸ್ಯರು ಬುಧವಾರ ಸಿರಿಯದ ಪೂರ್ವ ಘೌಟವನ್ನು ತೊರೆದಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ.

ಬಂಡುಕೋರರು ಅರ್ಬೀನ್ ಪಟ್ಟಣದಿಂದ ಉತ್ತರದ ಪ್ರಾಂತ ಇದ್ಲಿಬ್‌ಗೆ ಹೋಗಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯದಿಂದ ನಡೆಸಲ್ಪಡುವ ‘ಸೆಂಟರ್ ಫಾರ್ ರಿಕನ್ಸಿಲಿಯೇಶನ್ ಇನ್ ಸಿರಿಯ’ ಹೇಳಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪೂರ್ವ ಘೌಟದಲ್ಲಿ ಫೆಬ್ರವರಿ 18ರಿಂದ ಸಿರಿಯ ಮತ್ತು ರಶ್ಯದ ಸೇನೆಗಳು ಭೀಕರ ವಾಯು ಮತ್ತು ಭೂ ದಾಳಿಗಳನ್ನು ನಡೆಸುತ್ತಿವೆ.

ರಾಜಧಾನಿ ಡಮಾಸ್ಕಸ್ ಪಕ್ಕದಲ್ಲಿರುವ ಏಕೈಕ ಬಂಡುಕೋರ ನಿಯಂತ್ರಣದ ಪ್ರದೇಶ ಈಗ ಬಹುತೇಕ ಸಿರಿಯ ಸೇನೆಯ ನಿಯಂತ್ರಣದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News