×
Ad

ಮಂಗಳೂರು: ಐಡಿಎಫ್‌ಸಿ ಬ್ಯಾಂಕಿನ ನೂತನ ಶಾಖೆ ಉದ್ಘಾಟನೆ

Update: 2018-03-30 20:15 IST

ಮಂಗಳೂರು, ಮಾ.30: ದೇಶದಲ್ಲಿ ಕಾರ್ಯಚರಿಸುತ್ತಿರುವ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸ್ಥಾಪನೆಗೊಂಡಿದ್ದು, ಅದಕ್ಕ ನುಗುಣವಾಗಿ ಜಿಲ್ಲೆಯನ್ನು ಬ್ಯಾಂಕಿಂಗ್ ಉದ್ಯಮ ಕ್ಷೇತ್ರದ ತೊಟ್ಟಿಲು ಎಂದು ಪರಿಗಣಿಸಬಹುದು ಎಂದು ನಗರದ ಎಂ.ಸಿ.ಎಫ್. ಸಂಸ್ಥೆಯ ನಿರ್ದೇಶಕ ಕೆ. ಪ್ರಭಾಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಐಡಿಎಫ್‌ಸಿ ಬ್ಯಾಂಕ್‌ನ ನಗರದ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘದ ದ.ಕ. ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ಕೆ.ಆರ್. ಕಾಮತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬ್ಯಾಂಕಿನ ನೂತನ ಎಟಿಎಂ ಯಂತ್ರವನ್ನು ಉದ್ಘಾಟಿಸಿದರು.

ಬ್ಯಾಂಕಿನ ವಲಯ ಮುಖ್ಯಸ್ಥ ಬಿಪಿನ್ ಕೌಲ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಿದರು. ಉದ್ಯಮಿ ಸುನಿಲ್ ಸೆತಿನ್, ಮಂಗಳೂರು ಸಿಟಿ ರೋಟರಿ ಅಧ್ಯಕ್ಷ ಡಾ. ರಂಜನ್ ಅತಿಥಿಯಾಗಿ ಪಾಲ್ಗೊಂಡಿದ್ದರು.

ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಕೊಲಿನ್ ಡಿಸೋಜ ಸ್ವಾಗತಿಸಿದರು. ಶಾಖಾ ಮುಖ್ಯಪ್ರಬಂಧಕ ಸುಮಂತ್ ಮಲ್ಯ ವಂದಿಸಿದರು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News