ಪುತ್ತೂರು: ಕ್ಯಾಂಪ್ಕೋದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ
ಪುತ್ತೂರು, ಮಾ. 30: ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ನೌಕರರಿಗೆ ಪ್ರಥಮ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆ ತರಬೇತಿ ಕಾರ್ಯಾ ಗಾರವು ಮಾ.29 ಮತ್ತು 30ರಂದು ನಡೆಯಿತು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಅಗ್ನಿಶಾಮಕ ಇಲಾಖೆ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ನಡೆದ ತರಬೇತಿಯಲ್ಲಿ ರೆಡ್‌ಕ್ರಾಸ್ ಸೊಸೈಟಿಯ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮತ್ತು ದಕ್ಷಿಣ ಏಷ್ಯಾ ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ಡಾ. ವಿ.ಎಲ್. ಎಸ್. ಕುಮಾರ್ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳು ತರಬೇತಿ ಪ್ರಾತ್ಯಕ್ಷತ್ಯೆ ನಡೆಸಿದರು.
ಅಗ್ನಿ ಶಾಮಕ ದಳದ ಅಧಿಕಾರಿ ವಿ. ಸುಂದರ್ ಹಾಗೂ ತಂಡ ಬೆಂಕಿ ಅವಘಡಗಳು ಉಂಟಾದಾಗ ನಂದಿಸುವ ವಿಧಾನವನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿದರು. ಕ್ಯಾಂಪ್ಕೋ ಸಂಸ್ಥೆಯ ಎಜಿಎಂ. ಕರುಣಾಕರ ಶೆಟ್ಟಿಗಾರ್, ಭದ್ರತಾಧಿಕಾರಿ ರಂಗನಾಥ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಶ್ರೀನಿವಾಸ ಕುಂಜತ್ತಾಯ ರಾದೇಶ ಕುಂದಲ್ಪಾಡಿ, ಪ್ರಶಾಂತ್ ಡಿಎಸ್ ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು.