ಹೆಬ್ರಿ: ಅಕ್ರಮ ಜಾನುವಾರು ಸಾಗಾಟಗಾರರ ಬಂಧನ

Update: 2018-03-30 15:34 GMT

ಹೆಬ್ರಿ, ಮಾ. 30: ಹೆಬ್ರಿ ಪೊಲೀಸರು ಶುಕ್ರವಾರ ಮುಂಜಾನೆ ಗಸ್ತು ತಿರುಗುತ್ತಿದ್ದ ವೇಳೆ ಕುಚ್ಚೂರಿನ ಮೇಲ್ಬೆಟ್ಟು ಜಾನುವಾರುಗಳನ್ನು ಅಕ್ರಮವಾಗಿ ಬೊಲೆರೋ ಪಿಕ್‌ಅಪ್ ವಾಹನಕ್ಕೆ ತುಂಬಿಸುತ್ತಿರುವುದನ್ನು ಗಮನಿಸಿ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದರೂ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸುತಿದ್ದವರನ್ನು ಹೆಬ್ರಿ ಠಾಣಾಧಿಕಾರಿ ಬಸಪ್ಪ ಎ.ಇ ಮತ್ತವರ ತಂಡ ಬೆನ್ನತ್ತಿ ವಾಹನ ಸಹಿತ 9 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾನುವಾರು ಸಾಗಾಟದ ವಾಹನದಲ್ಲಿದ್ದ ಅಕ್ರಮ ಜಾನುವಾರು ಸಾಗಾಟಗಾರರಾದ ಹೆಬ್ರಿ ಚಾರದ ಧರ್ಮೇಶ ಪೂಜಾರಿ ಮತ್ತು ವೆಂಕಪ್ಪಶೆಟ್ಟಿ ಎಂಬವರನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ ಅಹ್ಮದ್ ಪೈಝಲ್, ಮಹಮ್ಮದ್  ಮತ್ತು ಆರೀಫ್ ಎಂಬವರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಧರ್ಮೇಶ ವಿರುದ್ಧ  ಅಕ್ರಮ ಜಾನುವಾರು ಸಾಗಾಟದ ಹಲವು ಕೇಸುಗಳಿವೆ.

ಪ್ರಕರಣದ ಕುರಿತು ಹೆಬ್ರಿ ನಡುಬೀಡಿನ ನಿತೀಶ್ ಪೂಜಾರಿ ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಮನೆಯಲ್ಲಿದ್ದ ನಾಲ್ಕು ಗಂಡು ಹಾಗೂ ಒಂದು ಹೆಣ್ಣು ಕರುಗಳನ್ನು ನಿನ್ನೆ ತಡ ರಾತ್ರಿ ಐವರು ಬೊಲೆರೋ ಪಿಕಪ್ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಜಾನುವಾರುಗಳ ಅಂದಾಜು ಮೌಲ್ಯ ಒಂದು ಲಕ್ಷ ರೂ. ಎಂದು ತಿಳಿಸಲಾಗಿದೆ.

ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಮಾರ್ಗದರ್ಶನದಲ್ಲಿ ಹೆಬ್ರಿ ಠಾಣಾಧಿಕಾರಿ ಬಸಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾರ್ಕಳ ಸಹಾಯಕ ಅಧೀಕ್ಷಕ ಹೃಷಿಕೇಶ ಸೋನಾವಣೆ ಹೆಬ್ರಿ ಠಾಣೆಗೆ ಬೇಟಿ ನಿೀಡಿ ಪ್ರಕರಣದ ವಿವರ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News