ಉಡುಪಿ: ಶೇಣಿ ಸಂಸ್ಮರಣೆ ಉದ್ಘಾಟನೆ
Update: 2018-03-30 21:08 IST
ಉಡುಪಿ, ಮಾ.30: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಶೇಣಿ ಶತಮಾ ನೋತ್ಸವ ಕಾರ್ಯಕ್ರಮ-99ರ ಪ್ರಯುಕ್ತ ಶೇಣಿ ಸಂಸ್ಮರಣೆ, ಸಮ್ಮಾನ, ತಾಳಮದ್ದಳೆ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಹೆಗ್ಡೆ ಎಂ. ಅವರು ಶೇಣಿ ಸಂಸ್ಮರಣೆ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಸಂಘಟಕ ಪಿ.ವಿಶ್ವೇಶ್ವರ ಭಟ್‌ರನ್ನು ಸನ್ಮಾನಿಸಲಾಯಿತು.