×
Ad

ನಟ ಪುನೀತ್ ರಾಜ್‌ಕುಮಾರ ಜೊತೆ ಭಟ್ಕಳದ ಝೇಂಕಾರ ಕುಟುಂಬ

Update: 2018-03-30 21:58 IST

ಭಟ್ಕಳ, ಮಾ. 30: ಕನ್ನಡ ಚಲನ ಚಿತ್ರ ರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ನಡೆಸಿಕೊಡುವ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಪ್ರತಿ ಶನಿವಾರ ಹಾಗೂ ರವಿವಾರ ರಾತ್ರಿ 9 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಭಟ್ಕಳದ ಝೇಂಕಾರ ಮೆಲೋಡಿಸ್‌ನ ಪ್ರಸನ್ನ ಪ್ರಭು ಇವರ ಕುಟುಂಬದ ಐವರು ಸದಸ್ಯರು ಭಾಗವಹಿಸಿದ್ದಾರೆ.

ಬೆಂಗಳೂರಿನ ಯಶೋಧಾ ಕುಟುಂಬದ ವಿರುದ್ಧ ಆಟವಾಡಿದ ಇವರು ಲಕ್ಷ್ಮೀ ಪಟಾಕಿ, ಗೇಮ್ಸ್ ಬಾಂಡ್, ತುತ್ತಾ-ಮುತ್ತಾ ಮತ್ತು ಲಕ್ಷ ಪ್ರಶ್ನೆ ಹೀಗೆ ವಿವಿಧ ಸುತ್ತುಗಳಲ್ಲಿ ಆಟವಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ನಮ್ಮ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದು, ಆ ಕಂತು ಇಂದು ರಾತ್ರಿ  9 ಗಂಟೆಗೆ  ಪ್ರಸಾರವಾಗಲಿದೆ. ಹಲವು ಕಲಾ ಪ್ರತಿಭೆಗಳಿರುವ ಈ ಝೇಂಕಾರ ಕುಟುಂಬ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News