ಎ.1: ಅಮೆಮಾರಿನಲ್ಲಿ ಹಿಜಾಮ ಚಿಕಿತ್ಸೆ
ಫರಂಗಿಪೇಟೆ, ಮಾ. 30: ತರ್ಬೀಯತುಲ್ ರಿಫಾಯಿ ದಫ್ ಕಮಿಟಿ ಅಮೆಮಾರ್ ಇದರ ಆಶ್ರಯದಲ್ಲಿ ಎ. 1 ರಂದು ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಕನಿಷ್ಟ ದರದಲ್ಲಿ ವೈದ್ಯ ಇಮ್ರಾನ್ ಅವರು ಹಿಜಾಮ ಚಿಕಿತ್ಸೆ ನಡೆಸಲಿದ್ದಾರೆ ಎಂದು ದಫ್ ಕಮಿಟಿಯ ಅಧ್ಯಕ್ಷ ಪುದು ಗ್ರಾಮ ಪಂ ಸದಸ್ಯ ಅಕ್ತಾರ್ ಹುಸೈನ್ ಎಮ್.ಎಮ್ ಪ್ರಕಟನೆ ತಿಳಿಸಿದ್ದಾರೆ.
ಏನಿದು ಹಿಜಾಮ: ಹಿಜಾಮ ಎಂಬುವುದು ಅರಬಿ ಪದವಾಗಿದ್ದು, ಇಂಗ್ಲಿಷ್ ನಲ್ಲಿ ಕಪ್ಪಿಂಗ್ ಎಂದು ಹೇಳಲಾಗುತ್ತದೆ. ಪ್ರವಾದಿ ಕಾಲದಿಂದಲೂ ಹಿಜಾಮ ಚಿಕಿತ್ಸೆ ಚಾಲ್ತಿಯಲ್ಲಿದೆ. ಗಲ್ಪ್ ರಾಷ್ಡ್ರಗಳಲ್ಲಿ ಮಾತ್ರ ಮಾಡುತ್ತಿದ್ದ ಈ ಚಿಕಿತ್ಸೆ ಈಗ ಭಾರತದ ವಿವಿದ ಭಾಗಗಳಲ್ಲಿ ಹಿಜಾಮ ಚಿಕಿತ್ಸೆ ನಡೆಸಲಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಸಣ್ಞ ಸಣ್ಣ ರಂದ್ರ ಮಾಡಿ ಕಶ್ಮಲ ಹೊಂದಿದ ರಕ್ತವನ್ನು ಕಪ್ಪಿಂಗ್ ಮೂಲಕ ಹೊರತೆಗೆಯಲಾಗುತ್ತದೆ. ಹಿಜಾಮ ಚಿಕಿತ್ಸೆ ಮಾಡಿದರೆ ರೋಗ ನಿರೋದಕ ಶಕ್ತಿ ವೃದ್ಧಿಯಾಗುತ್ತದೆ. ಪ್ರವಾದಿ ಮಹಮ್ಮದ್ (ಸ ಅ) ದೇಹದ ವಿವಿಧ ಭಾಗಕ್ಕೂ ಹಿಜಾಮ ಮಾಡಿಸಿದ್ದರು ಎಂದು ಹದೀಸ್ ಹೇಳುತ್ತಿದೆ ಎಂದು ವೈದ್ಯ ಇಮ್ರಾನ್ ಅವರು ತಿಳಿಸಿದ್ದಾರೆ.