×
Ad

ತೊಕ್ಕೊಟ್ಟು: ಹಾಜಿ ಗೋಲ್ಡ್‌ನಿಂದ ಲಕ್ಕಿ ಡ್ರಾ

Update: 2018-03-30 22:53 IST

ಮಂಗಳೂರು, ಮಾ. 30: ತೊಕ್ಕೊಟ್ಟು ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ಹಾಜಿ ಗೋಲ್ಡ್’ ಚಿನ್ನಾಭರಣ ಮಳಿಗೆಯಲ್ಲಿ ಲಕ್ಕಿ ಕೂಪನ್‌ಗಳ ಡ್ರಾ ಶುಕ್ರವಾರ ಮಳಿಗೆಯಲ್ಲಿ ನೆರವೇರಿತು.

ಕಳೆದ ಡಿ.10ರಂದು ಉದ್ಘಾಟನೆಗೊಂಡ ‘ಹಾಜಿ ಗೋಲ್ಡ್’ ಮಳಿಗೆಯು ತನ್ನ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ತನ್ನ ಗ್ರಾಹಕರಿಗೆ ಪ್ರತಿ 5,000 ರೂ. ಬೆಲೆಯ ಖರೀದಿಗೆ ಒಂದು ಕೂಪನ್‌ನ ಅವಕಾಶವನ್ನು ಕಲ್ಪಿಸಿತ್ತು. ಅದರ ಡ್ರಾ ಶುಕ್ರವಾರ ನೆರವೇರಿತು.

ಪ್ರಥಮ ಬಹುಮಾನ 1 ಲಕ್ಷ ರೂ. ಮೌಲ್ಯದ ಚಿನ್ನ, ಎರಡನೆ ಬಹುಮಾನ 50 ಸಾವಿರ ರೂ. ಮೌಲ್ಯದ ವಜ್ರ ಹಾಗೂ ತೃತೀಯ ಬಹುಮಾನ 25,000 ರೂ. ಬೆಲೆಯ ಟಿಸೊಟ್ ವಾಚ್‌ನ್ನು ಲಕ್ಕಿ ಡ್ರಾ ವಿಜೇತರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೆಲ್ತ್ ಇಂಡಿಯಾ ಫೌಂಡೇಶನ್‌ನ ರಾಝಿಕ್ ಉಳ್ಳಾಲ, ಫಲಾಹ್ ಎಜುಕೇಶನ್ ಇನ್ಸ್‌ಟಿಟ್ಯೂಟ್‌ನ ಕೆ.ಪಿ.ಇಸ್ಮಾಯೀಲ್ ನಾಗತೋಟ, ಸಂಸ್ಥೆಯ ಸ್ಥಾಪಕ ಪಾಲುದಾರ ಮುಹಮ್ಮದ್ ಶಾಬುದ್ದೀನ್, ಪಾಲುದಾರರಾದ ಮುಹಮ್ಮದ್ ಶುಐಬ್, ಮಹಮ್ಮದ್ ಬಾವ ಮೊದಲಾದವರು ಉಪಸ್ಥಿತರಿದ್ದರು.

ಎ.10ರಿಂದ ‘ಸ್ಕ್ರಾಚ್ ಆ್ಯಂಡ್ ವಿನ್’

ಮುಂದಿನ ತಿಂಗಳ ಎ.10ರಿಂದ ಆ.10ರವರೆಗೆ ಸಂಸ್ಥೆಯಲ್ಲಿ ಗೋಲ್ಡ್ ಫ್ಯಾಶನ್ ವಜ್ರಾಭರಣದ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಸ್ಕ್ರಾಚ್ ಆ್ಯಂಡ್ ವಿನ್ ಯೋಜನೆಯನ್ನು ಹಮ್ಮಿಕೊಂಡಿದೆ. ಎಲ್ಲಾ ಖರೀದಿದಾರರಿಗೂ ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ ಎಂದು ಮುಹಮ್ಮದ್ ಶಾಹಬುದ್ದೀನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News