ತೆಕ್ಕಟ್ಟೆ: ಚುನಾವಣಾಧಿಕಾರಿಗಳಿಂದ ಹಂದಿ ವಶ
Update: 2018-03-31 19:53 IST
ಕೋಟ, ಮಾ.31: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಂದಿಗಳನ್ನು ಚುನಾವಣಾಧಿಕಾರಿಯಾಗಿರುವ ಕುಂದಾಪುರ ಸಹಾಯಕ ಕಮೀಶನರ್ ಭೂಬಾಲನ್ ನೇತೃತ್ವದ ತಂಡ ಮಾ.31ರಂದು ಮಧ್ಯಾಹ್ನ ತೆಕ್ಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಂಡಿದೆ.
ಚುನಾವಣಾಧಿಕಾರಿ ಭೂಬಾಲನ್ ಪೊಲೀಸ್ ಸಿಬ್ಬಂದಿ ಹಾಗೂ ಗೋಪಾಡಿ ಪಂಚಾಯತ್ ಪಿಡಿಒ ಗಣೇಶ ಜೊತೆ ಚುನಾವಣಾ ಸಂಬಂಧ ತೆಕ್ಕಟ್ಟೆ ಜಂಕ್ಷನ್ ಸಮೀಪ ಕುಂದಾಪುರ-ಉಡುಪಿ ಏಕಮುಖ ಸಂಚಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದು, ಈ ಸಂದರ್ಭ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಫಿಯೆಟ್ ಕಾರಿನಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ 7 ಹಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.