×
Ad

ನುಸುಳುವಿಕೆ ಬಗ್ಗೆ ಸೇನೆಯನ್ನು ಕೇಳಿ, ನಾವಂತೂ ಅವಕಾಶ ನೀಡಿಲ್ಲ:ಬಿಎಸ್‌ಎಫ್

Update: 2018-03-31 20:51 IST

ಜಮ್ಮು,ಮಾ.31: ಪಾಕಿಸ್ತಾನದೊಂದಿಗಿನ ಅಂತರ್ ರಾಷ್ಟ್ರೀಯ ಗಡಿಯಲ್ಲಿ ಒಂದೇ ಒಂದು ನುಸುಳುವಿಕೆಗೆ ತಾನು ಅವಕಾಶ ನೀಡಿಲ್ಲ ಎಂದು ಹೇಳಿರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯು, ಇತ್ತೀಚಿಗೆ ನುಸುಳುವಿಕೆ ಪ್ರಕರಣವು ನಡೆದಿರುವ ಪ್ರದೇಶದಲ್ಲಿ ಸೇನೆಯ ಸಿಬ್ಬಂದಿ ಕಾವಲು ನಿರ್ವಹಿಸು ತ್ತಿದ್ದರು ಎಂದು ಹೇಳಿದೆ.

ಮಾ.28ರಂದು ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರಬನಿ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದು, ಅವರು ನಾಲ್ಕೈದು ದಿನಗಳ ಹಿಂದೆ ಗಡಿಯಾಚೆಯಿಂದ ಭಾರತದ ಪ್ರದೇಶದೊಳಗೆ ನುಸುಳಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಚಿನಾಬ್ ನದಿಯ ಉತ್ತರದಲ್ಲಿರುವ ಗಡಿ ಪ್ರದೇಶವು ಸೇನೆಯ ನಿಯಂತ್ರಣದಲ್ಲಿದ್ದು, ದಕ್ಷಿಣ ಭಾಗವು ಬಿಎಸ್‌ಎಫ್‌ನ ನಿಯಂತ್ರಣದಲ್ಲಿದೆ. ನಾವು ಯಾವುದೇ ನುಸುಳುವಿಕೆಗೆ ಅವಕಾಶ ನೀಡಿಲ್ಲ. ಚಿನಾಬ್ ನದಿಯ ಉತ್ತರದಲ್ಲಿರುವ ಪ್ರದೇಶದ ಬಗ್ಗೆ ನಾನು ಯಾವುದೇ ಹೇಳಿಕೆಯನ್ನು ನೀಡುವಂತಿಲ್ಲ. ನೀವು ಆ ಬಗ್ಗೆ ಸೇನೆಯೊಂದಿಗೆ ಮಾತನಾಡಬಹುದು ಎಂದು ಬಿಎಸ್‌ಎಫ್‌ನ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News