ಎಸ್‌ಡಿಪಿಐ ಮಂಚಿ ವಲಯ ಸಮಿತಿ: ಕಾರ್ಯಕರ್ತರ ಸಭೆ
ಬಂಟ್ವಾಳ, ಮಾ. 31: ಜಿಲ್ಲಾ ಉಸ್ತುವಾರಿ ಸಚಿವರ ಆಡಳಿತ ವೈಫಲ್ಯಗಳನ್ನು ಮತ್ತು ಪಕ್ಷದ ಕಾರ್ಯ ಚಟುವಟಿಕೆಯನ್ನು ಮತದಾರರಿಗೆ ತಿಳಿಸುವ ಮೂಲಕ ಚುನಾವಣೆಗೆ ತಯಾರಾಗಬೇಕೆಂದು ಬಂಟ್ವಾಳ ವಿಧಾನಸಭಾ ಎಸ್‌ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಎಸ್‌ಡಿಪಿಐ ಮಂಚಿ ವಲಯ ಸಮಿತಿ ವತಿಯಿಂದ ಶುಕ್ರವಾರ ರಾತ್ರಿ ಮಂಚಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಬಂಟ್ವಾಳದಲ್ಲಿ ಕೋಮುವಾದವನ್ನು ಮಟ್ಟ ಹಾಕುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅಲ್ಲದೆ ಜನರು ಜಿಲ್ಲೆಯಲ್ಲಿ ಶಾಂತಿ ಹಾಗೂ ಸಾಮರಸ್ಯ ಬಯಸುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆಯ ಅಲೆ ಬೀಸಿದೆ. ಇದರಿಂದ ಜನರು ಎಸ್‌ಡಿಪಿಐಯತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುಳ್ಳು ಅಂಕಿ ಅಂಶಗಳನ್ನು ಹೇಳುವ ಮೂಲಕ ಜನರನ್ನು ವಂಚನೆ ಮಾಡಲಾಗಿದೆ. ಇದಕ್ಕೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶ್ರಫ್ ಮಂಚಿ, ಮುಖಂಡರಾದ ಅಕ್ಬರ್ ಅಲಿ, ಮಾಲಿಕ್ ಕೊಳಕೆ, ಕೊಳ್ನಾಡು ವಲಯ ಅಧ್ಯಕ್ಷ ಹಸೈನಾರ್ ಸಾಲೆತ್ತೂರು, ಮಂಚಿ ವಲಯ ಸಮಿತಿ ಅಧ್ಯಕ್ಷ ಫಾರೂಕ್ ಡಿ.ಎನ್., ಉಪಾಧ್ಯಕ್ಷ ನವಾಝ್ ಕಡಂಗಡಿ ಮತ್ತಿತರರು ಉಪಸ್ಥಿತರಿದ್ದರು.