×
Ad

ಭೋಜನ ವ್ಯವಸ್ಥೆ ಇರುವ ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಉಡುಪಿ ಚುನಾವಣಾಧಿಕಾರಿ

Update: 2018-03-31 21:53 IST

ಉಡುಪಿ, ಮಾ.31: ಭೋಜನ ವ್ಯವಸ್ಥೆ ಹಾಗೂ ಜನ ಸೇರುವ ಸಮಾರಂಭ ಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆಗಳಿರುವುದ ರಿಂದ ಆ ಬಗ್ಗೆ ನಿಗಾ ವಹಿಸಲು ಚುನಾವಣಾ ಆಯೋಗದಿಂದ ಅನುಮತಿ ಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಉಡುಪಿ ಜಿಲ್ಲಾ ಚುನಾವಣಾ ಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಾಧ್ಯಮದವರಿಗೆ ಮತ ಯಂತ್ರ ಇವಿಎಂ ಬಳಕೆ ಮತ್ತು ವಿವಿ ಪ್ಯಾಟ್ ಕುರಿತ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದ ಬಳಿಕ ಅವರು ಮಾತನಾಡುತಿದ್ದರು.

ಮದುವೆ, ಮೆಹೆಂದಿ, ಹುಟ್ಟುಹಬ್ಬ ಆಚರಣೆ, ದೇವಸ್ಥಾನದ ಜಾತ್ರೆ ಸಮಾ ರಂಭಗಳಲ್ಲಿ ಜನ ಸೇರುವುದರಿಂದ ಹಾಗೂ ಭೋಜನದ ವ್ಯವಸ್ಥೆಗಳಿರುವು ದರಿಂದ ರಾಜಕಾರಣಿಗಳು ಭಾಗವಹಿಸುವ ಬಗ್ಗೆ ಆಯೋಗವು ನಿಗಾ ವಹಿಸ ಬೇಕಾಗುತ್ತದೆ. ಆದುದರಿಂದ ಆ ಬಗ್ಗೆ ಸಂಘಟಕರು ಆಯೋಗಕ್ಕೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು ಎಂದರು. ಅದರಂತೆ ಇಂತಹ ಸಮಾರಂಭಗಳಿಗೆ ನಮ್ಮ ತಂಡ ಹೋಗಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಬಗ್ಗೆ ನಿಗಾ ವಹಿಸುವುದಕ್ಕಾಗಿ ವಿಡೀಯೋ ಚಿತ್ರೀಕರಣ ಮಾಡುತ್ತದೆ. ಇಂತಹ ಸಮಾರಂಭಗಳಿಗೆ ರಾಜಕಾರಣಿಗಳು ಕೂಡ ಹೇಳದೆ ಹೋಗುವಂತಿಲ್ಲ. ಅವರು ಕೂಡ ಈ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಬೇಕಾ ಗುತ್ತದೆ. ಇಲ್ಲದಿದ್ದರೆ ಅದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು.

ಧಾರ್ಮಿಕ ಕಟೌಟು ತೆರವು: ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್, ಕಟೌಟ್‌ಗಳನ್ನು ತೆರವುಗೊಳಿಸಿರುವ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ಕಾನೂನು ಪ್ರಕಾರ ಗ್ರಾಪಂ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಬ್ಯಾನರ್ ಹಾಕುವ ಜಾಗವನ್ನು ಗುರುತಿಸಿ ಆ ಬಗ್ಗೆ ಸುತ್ತೋಲೆ ಹೊರಡಿಸಬೇಕು. ಉಡುಪಿ ನಗರಸಭೆ ಹೊರತು ಪಡಿಸಿ ಉಳಿದ ಯಾವುದೇ ಗ್ರಾಪಂಗಳು ಈ ರೀತಿ ಸುತ್ತೋಲೆಯನ್ನು ಹೊರಡಿಸಿಲ್ಲ. ಧಾರ್ಮಿಕ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಕಟೌಟುಗಳನ್ನು ಆಳವಡಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಅದು ಬಿಟ್ಟು ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳನ್ನು ಹಾಕುವಂತಿಲ್ಲ. ಅಂತಹ ಬ್ಯಾನರ್, ಕಟೌಟು ಗಳನ್ನು ತೆರವುಗೊಳಿಸಲಾಗುತ್ತದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ, ಟೀಕೆಗಳು, ಮಾನ ನಷ್ಟ ಮಾಡುವುದರ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಆ ಬಗ್ಗೆ ದೂರು ಬಂದರೆ ಪ್ರಕರಣ ದಾಖಲಿಸಲಾಗು ವುದು ಎಂದು ಅವರು ತಿಳಿಸಿದರು.

ಮಾಸ್ಟರ್ ತರಬೇತುದಾರ ಓ.ಆರ್.ಪ್ರಕಾಶ್ ಇವಿಎಂ ಬಳಕೆ ಹಾಗೂ ವಿವಿ ಪ್ಯಾಟ್ ಕುರಿತ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮತದಾನ ಪ್ರಕ್ರಿಯೆಗೆ ಸಂಬಂಧಿಸಿ ನಿಯಂತ್ರಣ ಘಟಕ, ಬ್ಯಾಲೆಟ್ ಘಟಕ, ವಿವಿ ಪ್ಯಾಟ್ ಘಟಕ, ವಿವಿ ಪ್ಯಾಟ್ ಸ್ಟೇಟಸ್ ಡಿಸ್ಪ್ಲೆ ಘಟಕ ಎಂಬ ನಾಲ್ಕು ಘಟಕಗಳಿದ್ದು, ಬ್ಯಾಲೆಟ್ ಘಟಕದಲ್ಲಿ ಮತ ಚಲಾಯಿಸಿದ ಬಳಿಕ ವಿವಿ ಪ್ಯಾಟ್‌ನಲ್ಲಿ ಮತ ಚಲಾಯಿಸಿದ ಮುದ್ರಿತ ಚೀಟಿಯನ್ನು ನೋಡಿ ದೃಢಪಡಿಸಬಹುದು. ಈ ಮತ ಚೀಟಿಯು ಏಳು ಸೆಕೆಂಡುಗಳವರೆಗೆ ಮಾತ್ರ ಕಾಣುತ್ತದೆ. ಯಾವುದೇ ಕಾರಣಕ್ಕೂ ಆ ಚೀಟಿಯನ್ನು ಮತದಾರರಿಗೆ ನೀಡಲಾಗುವುದಿಲ್ಲ ಎಂದು ಅವರು ಹೇಳಿ ದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಪಾಶಿ ಮೊದಲಾದವರು ಉಪಸ್ಥಿತರಿದ್ದರು.

ನೀತಿ ಸಂಹಿತೆ ಉಲ್ಲಂಘನೆ: 23 ಪ್ರಕರಣಗಳು
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಈವರೆಗೆ ಜಿಲ್ಲೆಯಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.
ಅಬಕಾರಿಗೆ ಸಂಬಂಧಿಸಿ 19 ಪ್ರಕರಣಗಳು, ಮದ್ಯ ಸಾಗಾಟಕ್ಕೆ ಸಂಬಂಧಿಸಿ ಎರಡು ವಶಪಡಿಸಿಕೊಂಡ ಪ್ರಕರಣ, ಒಂದು ಪ್ರಮೋದ್ ಪ್ರಚಾರ ವಾಹನ ವಶ ಹಾಗೂ ಕೋಟ ಕರಪತ್ರ ವಶಪಡಿಸಿಕೊಂಡ ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ನೀತಿ ಸಂಹಿತೆ ಉಲ್ಲಂಘನೆಯ ಮಾಹಿತಿ ನೀಡಿ
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕುರಿತು ಮಾಹಿತಿ ನೀಡಲು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವಂತೆ ಜಿಲ್ಲಾಡಳಿತ ತಿಳಿಸಿದೆ.
 ಟೋಲ್ ಫ್ರೀ ಸಂಖ್ಯೆ: 1077, ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಚುನಾ ವಣಾ ಶಾಖೆ- 0820-2574920, ಬೈಂದೂರು ಚುನಾವಣಾಧಿಕಾರಿ: 08254-251617, ಕುಂದಾಪುರ ಚುನಾವಣಾಧಿಕಾರಿ: 08254-231984, ಕಾರ್ಕಳ ಚುನಾವಣಾಧಿಕಾರಿ: 08258-230201, ಉಡುಪಿ ಚುನಾವಣಾಧಿ ಕಾರಿ: 0820-2520417, ಕಾಪು ಚುನಾವಣಾಧಿಕಾರಿ: 0820-2521198

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News