×
Ad

ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರತ್ಯೇಕ ಸಮಿತಿ: ಶಿವಾನಂದ ಕಾಪಶಿ

Update: 2018-03-31 21:57 IST

ಉಡುಪಿ, ಮಾ.31: ಕಳೆದ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನ ನಡೆದ ಪ್ರದೇಶಗಳನ್ನು ಗುರುತಿಸಿ ಕಾರಣಗಳನ್ನು ಅಭ್ಯಸಿಸಿ, ಆ ಪ್ರದೇಶಗಳಲ್ಲಿ ಮತದಾನದ ಪ್ರಮಾಣವನ್ನು ಶೇಕಡಾವಾರು ಹೆಚ್ಚಿಸಲು ಪ್ರತ್ಯೇಕ ಸಮಿತಿ ರಚಿಸಿ ಮತದಾನಕ್ಕೆ ಅರ್ಹ ಮತದಾರರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮಣಿಪಾಲದ ಜಿಪಂ ಕಚೇರಿಯಲ್ಲಿ ಶನಿವಾರ ಈ ಸಂಬಂಧ ಆಯೋಜಿಸಿದ ಸ್ವೀಪ್ ಸಮಿತಿ ಸಭೆಯಲ್ಲಿ ವಿವಿಧ ಅಧಿಕಾರಿಗಳಿಗೆ ಸ್ವೀಪ್ ಚಟುವಟಿಕೆ ಹೊಣೆ ಯನ್ನು ನೀಡಿ, ಚಳವಳಿ ಮಾದರಿಯಲ್ಲಿ ಜನರನ್ನು ತಲುಪಲು ವಿವಿಧ ಮಾಧ್ಯಮಗಳನ್ನು ಬಳಸುವುದಲ್ಲದೆ ನೇರಸಂಪರ್ಕ ಸಾಧಿಸಿ ಮತದಾರರಿಗೆ ಮತದಾನದ ಮಹತ್ವವನ್ನು ವಿವರಿುವಂತೆ ಸೂಚಿಸಿದರು.

ಹೋರ್ಡಿಂಗ್, ಯಕ್ಷಗಾನ, ಮೈಮ್ ಶೋ, ಮಾನವ ಸರಪಳಿಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಮೂಡಿಸಲಾಗುವುದು. ಎ.7 ಮತ್ತು 8ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ವಿದ್ಯಾಂಗ ಇಲಾಖೆ ಹಮ್ಮಿ ಕೊಂಡಿದ್ದು, ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಪಾಲ್ಗೊಳ್ಳುವ ವೇಳೆ ಮಾಹಿತಿ ಹಾಗೂ ಪ್ರತಿಜ್ಞಾವಿಧಿ ಬೋಧನೆಯನ್ನು ಶಿಕ್ಷಣ ಇಲಾಖಾ ಮುಖ್ಯಸ್ಥರು ನೀಡಲಿರುವರು ಎಂದು ವಿದ್ಯಾಂಗ ಇಲಾಖೆು ಮುಖ್ಯಸ್ಥರು ಮಾಹಿತಿ ನೀಡಿದರು.

ವಿಶ್ವ ಆರೋಗ್ಯ ದಿನಾಚರಣೆ ವೇಳೆಯೂ ಮಾಹಿತಿ ನೀಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿಎಚ್‌ಒ ಡಾ. ರೋಹಿಣಿ ತಿಳಿಸಿದರು. ಬಿಗ್ ಬಜಾರ್ ಎದುರು ರಂಗೋಲಿ ಸ್ಪರ್ಧೆಯನ್ನು ಈ ಸಂಬಂಧ ಆಯೋಜಿ ಸಲು ಸಿಇಒ ಸಭೆಯಲ್ಲಿ ಸೂಚಿಸಿದರು.

ಸಭೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News