×
Ad

​ಉಡುಪಿ ನಗರಸಭೆ: ಆನ್‌ಲೈನ್‌ನಲ್ಲಿ ಶುಲ್ಕ ಪಾವತಿ

Update: 2018-03-31 22:01 IST

ಉಡುಪಿ, ಮಾ.31: ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಉಡುಪಿ ನಗರಸಭೆಯಲ್ಲಿ ಸ್ವೀಕೃತಿ ತಂತ್ರಾಂಶವನ್ನು ಖಜಾನೆ-2 ತಂತ್ರಾಂಶದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಇದರಿಂದ ಉಡುಪಿ ನಗರಸಭೆಗೆ ಪಾವತಿಸಬೇಕಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ, ಮಳಿಗೆ ಬಾಡಿಗೆ ಮತ್ತು ಇನ್ನಿತರ ಸೇವಾ ಶುಲ್ಕವನ್ನು, ಸಾರ್ವಜನಿಕರಿಂದ ಸ್ವೀಕರಿಸಲಾಗುವ ಪಾವತಿಗಳನ್ನು ಎ.2ರಿಂದ ಸ್ವೀಕೃತಿ ತಂತ್ರಾಂಶದ ಓವರ್ ದ ಕೌಂಟರ್ ಚಲನ್ ಪಡೆದು ನೇರವಾಗಿ ಬ್ಯಾಂಕಿನಲ್ಲಿ ನಗದು, ಡಿಡಿ, ಚೆಕ್ ಅಥವಾ ಆನ್‌ಲೈನ್ ಮೂಲಕ ನಗರಸಬೆಗೆ ಪಾವತಿಸಬಹುದು.

ಅಲ್ಲದೇ ಸಾರ್ವಜನಿಕರು ಇದಕ್ಕಾಗಿ ಯಾರ ಬಳಿಯೂ ಹಣ ನೀಡದೆ ತಾವೇ ಖುದ್ದು ಬ್ಯಾಂಕಿನಲ್ಲಿ ಪಾವತಿಸಬೇಕು. 3ನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೆ ಉಡುಪಿ ನಗರಸಭೆ ಹೊಣೆಯಲ್ಲ ಎಂದು ಉಡುಪಿ ನಗರಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News