×
Ad

ಉಡುಪಿ: ಭೋಜನಶಾಲೆ ಮುಖ್ಯಪ್ರಾಣನಿಗೆ ಸುವರ್ಣ ಅಭಿಷೇಕ

Update: 2018-03-31 22:08 IST

ಉಡುಪಿ, ಮಾ.31: ಹನುಮಜ್ಜಯಂತಿ ಪ್ರಯುಕ್ತ ಇಂದು ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿರುವ ಶ್ರೀಮುಖ್ಯಪ್ರಾಣದೇವರಿಗೆ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮಧು ಅಭಿಷೇಕ ಹಾಗೂ ಒಂದು ಸಾವಿರ ಸುವರ್ಣ ನಾಣ್ಯಗಳ ಕನಕಾಭಿಷೇಕ ಮಾಡಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರ್ಯಾಯ ಪಲಿಮಾರು ಶ್ರೀಗಳು ಇಂದು ಇಲ್ಲಿನ ಪ್ರಾಣದೇವರಿಗೆ ಅಭಿಷೇಕ ಮಾಡಿದ ತಲಾ ಒಂದು ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ಅಪೇಕ್ಷಿಸುವ ಭಕ್ತರಿಗೆ ತಲಾ ಹತ್ತು ಸಾವಿರ ರೂ.ಗಳಿಗೆ ನೀಡಲಾಗುತ್ತದೆ. ಇದರಿಂದ ಬಂದ ಹಣವನ್ನು ತಮ್ಮ ಈ ಬಾರಿಯ ಪರ್ಯಾಯದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಹೊದಿಕೆಗೆ ಬಳಸಲಾಗುವುದು.

ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣರಿಗೆ ಅಭಿಷೇಕ ಮಾಡಿದ ಈ ಚಿನ್ನದ ನಾಣ್ಯಗಳನ್ನು ಮುಂದಿನ ಅಕ್ಷಯ ತೃತೀಯ ದಿನದಂದು ಅಪೇಕ್ಷಿಸಿದವರಿಗೆ ನೀಡಲಾಗುತ್ತದೆ ಎಂದರು. ಇದೇ ವೇಳೆ ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಹನುಮನಿಗೆ ಶ್ರೀಹರಿವಾಯು ಸ್ತುತಿ ಪುರಶ್ಚರಣೆ ಪುರಸ್ಸರ ಮಧು ಅಭಿಷೇಕವನ್ನು ಮಾಡಿದರು.

ಇದರೊಂದಿಗೆ ಹನುಮಜ್ಜಯಂತಿ ಪ್ರಯುಕ್ತ ಭೋಜನಶಾಲೆಯ ಶ್ರೀಮುಖ್ಯಪ್ರಾಣನಿಗೆ ವಿವಿಧ ಕಾರ್ಯಕ್ರಮಗಳು ಜರಗಿದವು. ಭೋಜನ ಶಾಲೆಯಲ್ಲಿ ವಿಪ್ರ ಭಾಂದವರು ಒಂದು ಸಹಸ್ರ ಆವೃತಿ ಶ್ರೀಹರಿವಾಯುಸ್ತುತಿ ಪಾರಾಯಣ ಮಾಡಿದರು. ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ಹನುಮಜ್ಜಯಂತಿ ಪ್ರಯುಕ್ತ ಪ್ರತಿವರ್ಷ ನಡೆಯುವ ಸಾರ್ವಜನಿಕಅನ್ನಸಂತರ್ಪಣೆಗೆ ಪರ್ಯಾಯ ಶ್ರೀವಿದ್ಯಾಧೀಶ ತೀರ್ಥರು ಪಲ್ಲ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಎಂ.ಎಸ್.ಭಟ್, ಭುವನೇಂದ್ರ ಕಿದಿಯೂರು, ಗೋಪಾಲ್ ಕುಂದರ್, ಹರಿಯಪ್ಪ ಕೋಟ್ಯಾನ್,ಜಿತೇಶ್ ಕಿದಿಯೂರು, ಯುವರಾಜ್ ಮಸ್ಕತ್ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ಹಮ್ಮಿಕೊಂಡ ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮವನ್ನು ಅದಮಾರು ಮಠದ ವೆಂಕಟರಮಣ ಮುಚ್ಚಿಂತ್ತಾಯರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪಲಿಮಾರು ಮಠದ ಶ್ರೀಶ ಕಡೆಕಾರ್, ಸಮಿತಿಯ ಭುವನೇಂದ್ರ ಕಿದಿಯೂರು, ಗೋಪಾಲ್ ಕುಂದರ್, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಈಶ್ವರ್ ಚಿಟ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಮಠದ ಮ್ವಮಂಟಪದಲ್ಲಿಶ್ರೀಕೃಷ್ಣಮುಖ್ಯಪ್ರಾಣಸೇವಾಸಮಿತಿಹಮ್ಮಿಕೊಂಡವಿವಿ ಜನಾಮಂಡಳಿಗಳಜನಾ ಕಾರ್ಯಕ್ರಮವನ್ನು ಅದಮಾರು ಮಠದ ವೆಂಕಟರಮಣ ಮುಚ್ಚಿಂತ್ತಾಯರು ಉದ್ಘಾಟಿಸಿದರು.ಈ ಸಂದರ್ದಲ್ಲಿಪಲಿಮಾರುಮಠದಶ್ರೀಶಕಡೆಕಾರ್,ಸಮಿತಿಯುವನೇಂದ್ರ ಕಿದಿಯೂರು, ಗೋಪಾಲ್ ಕುಂದರ್, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಈಶ್ವರ್ ಚಿಟ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೆ ಪರ್ಯಾಯಶ್ರೀಗಳು ಚಾಲನೆ ನೀಡಿದರು. ಅಲ್ಲದೇ ಶ್ರೀಕೃಷ್ಣ ಮಠದಲ್ಲಿ ಪಲಿಮಾರು ಮಠದ ಆಶ್ರಯದಲ್ಲಿ ಹನುಮಜ್ಜಯಂತಿ ಪ್ರಯುಕ್ತ ವಾಯುಸ್ತುತಿ ಪುನಶ್ಚರಣ ಹೋಮ, ಶ್ರೀ ಕೃಷ್ಣ ಮಹಾಮಂತ್ರ ಹೋಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News