ಶಿವರಾಜ್ ಕರ್ಕೇರಾ ಕೊಲೆ ಪ್ರಕರಣ: ಮೂವರಿಗೆ ಜಾಮೀನು
Update: 2018-03-31 23:53 IST
ಮಂಗಳೂರು, ಮಾ. 31: ನಗರದ ಹೊರವಲಯದ ಪಣಂಬೂರು ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ನಿವಾಸಿ ಶಿವರಾಜ್ ಕರ್ಕೇರಾ ಎಂಬವರನ್ನು ಕೊಲೆಗೈದ ಪ್ರಕರಣದ ಮೂವರು ಆರೋಪಿಗಳಿಗೆ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ.
ಅಜಯ್, ವಿಕ್ರಮ್ ಹಾಗೂ ಸುಮನ್ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು.
2018 ಜ.22ರಂದು ಬೆಳಗ್ಗಿನ ಜಾವ 4:30ಕ್ಕೆ ತಣ್ಣೀರುಬಾವಿಯ ತನ್ನ ಮನೆಯ ಮಾಳಿಗೆಯಲ್ಲಿ ಮಲಗಿದ್ದ ಶಿವರಾಜ್ ಕರ್ಕೇರಾ ಅವರನ್ನು ಮಾರಕಾಯುಧ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ಆರೋಪಿಗಳ ಪರ ವಕೀಲರ ವಾದವನ್ನು ಪುರಸ್ಕರಿಸಿ ಮೂವರು ಆರೋಪಿ ಗಳಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ವೇಣು ಕುಮಾರ್ ಮತ್ತು ಯುವರಾಜ್ ಕೆ.ಅಮೀನ್ ವಾದಿಸಿದ್ದರು.